ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ. ದೆಹಲಿಯ ಒಟ್ಟು 70 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 63 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸೋ ಮೂಲಕ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಇದರಿಂದ ದೆಹಲಿಯ ಗದ್ದುಗೆ ಹಿಡಿಯಬೇಕೆಂಬ ಬಿಜೆಪಿಯ ಬಹುದಿನಗಳ ಕನಸಿಗೆ ಆಮ್ ಆದ್ಮಿ ಪಕ್ಷ ತಣ್ಣೀರು ಎರಚಿದೆ. ಇತ್ತ, ದೆಹಲಿಯಲ್ಲಿ ಸುದೀರ್ಘ ಕಾಲ ನಡೆಸಿದ್ದ ಕಾಂಗ್ರೆಸ್ ಪಕ್ಷ ಯಾವುದೇ ಖಾತೆ ತೆರೆಯದೇ ಇರುವುದು ಪಕ್ಷದ ನಾಯಕರಿಗೆ ತೀವ್ರ ಮುಖಭಂಗ ಉಂಟು ಮಾಡಿದೆ.
ಈ ನಡುವೇ ಹ್ಯಾಟ್ರಿಕ್ ಗೆಲುವಿನ ಹರ್ಷದಲ್ಲಿರುವ ಆಮ್ ಆದ್ಮಿ ನಾಯಕ ಅರವಿಂದ ಕೇಜ್ರಿವಾಲ್ ದೆಹಲಿ ಮತದಾರರಿಗೆ ವಂದನೆಗಳನ್ನ ಸಮರ್ಪಿಸಿದ್ದಾರೆ. ಪಕ್ಷ ದಿಗ್ವಿಜಯದ ಕುರಿತು ದೆಹಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಇದು ನಮ್ಮ ಗೆಲುವಲ್ಲ, ದೆಹಲಿ ಜನತೆಯ ಗೆಲುವು, ಅಭಿವೃದ್ಧಿಗೆ ಸಿಕ್ಕೆ ಗೆಲುವು ಎಂದು ಮತದಾರ ಪ್ರಭುಗಳಿಗೆ ಹೃದಯ ತುಂಬಿ ಕೃತ್ಞತೆ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳೀ ನಡೆಸಿದ ಅರವಿಂದ್ ಕೇಜ್ರಿವಾಲ್, ಆಪ್ ಗೆ ಮತ ನೀಡುವ ಮೂಲಕ ದೆಹಲಿ ಜನತೆ ಹೊಸ ಬಗೆಯ ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ. ಇದು ರಾಜಕಾರಣದ ರಾಜಕೀಯವಲ್ಲ, ಅಭಿವೃದ್ದಿ ಮತ್ತು ಕೆಲಸದ ರಾಜಕೀಯ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.