APP | BMLTA ಮಸೂದೆ ಮಂಡಿಸಿ: ಆಮ್ ಆದ್ಮಿ ಪಕ್ಷದ ಆಗ್ರಹ
ಪ್ರಸ್ತಾವಿತ BMLTA ಮಸೂದೆಯು ಅನೇಕ ವರ್ಷಗಳಿಂದ ಮಂಡನೆಯಾಗದೆ ಕೇವಲ ಆಶ್ವಾಸನೆಯಲ್ಲೇ ಉಳಿದಿದೆ.
ಹೀಗಾಗಿ ಈ ಮಸೂದೆಯಲ್ಲಿ ಮಂಡಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.
ಈ ಸಂಬಂಧ ಎಎಪಿ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ರವರು ಇಂದು ಸಾರಿಗೆ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ BMLTA ಮಸೂದೆ ಮಂಡನೆಗೆ ಸಿದ್ದತೆ ಮಾಡಿಕೊಂಡು, ಮುಂದಿನ ಅಧಿವೇಶನದಲ್ಲಿ ಸದನದ ಮುಂದೆ ಮಂಡಿಸಿ ಒಪ್ಪಿಗೆ ಪಡೆದು, ಕಾಯ್ದೆ ರೂಪಿಸಬೇಕೆಂದು ಆಗ್ರಹಿಸಿದ್ದಾರೆ.
“ಮೆಟ್ರೋ, ಉಪನಗರ ರೈಲು, ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಸಾವಿರಾರು ಕೋಟಿ ಖರ್ಚು ಮಾಡಿದ್ದರೂ ಜನರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಮಾಲಿನ್ಯಕ್ಕೆ ತುತ್ತಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ.
ನಮ್ಮ ನಗರವು ಇತ್ತಿಚಿಗೆ ಕಳೆದುಕೊಂಡಿರುವ ‘ನವ ಉದ್ಯಮಗಳ ತಾಣ’ ಎಂಬ ಬಿರುದನ್ನು ಮರಳಿ ಪಡೆಯಬೇಕಾದರೆ ರಾಜ್ಯ ಸರ್ಕಾರ BMLTA ಮಸೂದೆ ಮಂಡಿಸಬೇಕು.
ಕಣ್ಮರೆಯಾಗಿರುವ ಸಂಸ್ಥೆಗಳ ನಡುವಣ ಸಮನ್ವಯತೆಯನ್ನು ಸಾಧಿಸಲು BMLTA ಕಾಯ್ದೆ ಅನುವು ಮಾಡಿ ಕೊಡುತ್ತದೆ.
ತಮಗೆ ತೋಚಿದ ಹಾಗೆ ಕೆಲಸ ಮಾಡುತ್ತಾ ಜನರ ಪಾಡನ್ನು ಲೆಕ್ಕಿಸದೇ ಭ್ರಷ್ಟಾಚಾರ ಮಾಡುತ್ತಿರುವ ನಗರದ ಸಂಸ್ಥೆಗಳಿಗೆ ಈ ಕಾಯ್ದೆ ಜಾರಿಯಾಗಲೇ ಬೇಕಿದೆ.
ಒಂದೊಮ್ಮೆ ಇದನ್ನು ಮಂಡಿಸದೇ ಹೋದಲ್ಲಿ, ನಮ್ಮ ಪಕ್ಷವು ಇದನ್ನು ಜನತಾ ನ್ಯಾಯಾಲಯದ ಮುಂದೆ ವಿಸ್ತಾರವಾಗಿ ಚರ್ಚಿಸಲು ತೀರ್ಮಾನಿಸಿದೆ ಎಂದು ಪೃಥ್ವಿ ರೆಡ್ಡಿ ಎಚ್ಚರಿಸಿದ್ದಾರೆ.









