ಯೋಗಿ ನಾಡಿನತ್ತ ಅರವಿಂದ ಕೇಜ್ರಿವಾಲ್ ಚಿತ್ತ..!
ನವದೆಹಲಿ : ಆಮ್ ಆದ್ಮಿ ಪಕ್ಷದ ಮೂಲಕ ದೆಹಲಿಯಲ್ಲಿ ರಾಷ್ರೀಯ ಪಕ್ಷಗಳಿಗೆ ಟಕ್ಕರ್ ನೀಡಿದ್ದ ಅರವಿಂದ ಕೇಜ್ರಿವಾಲ್ ಇದೀಗ ಯೋಗಿ ನಾಡಿನತ್ತ ಗಮನ ಹರಿಸಿದ್ದಾರೆ.
ಅಂದ್ರೆ 2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಉತ್ತರ ಪ್ರದೇಶ ಕೂಡ ದೆಹಲಿಯಂತಹ ಕಲ್ಯಾಣ ಮತ್ತು ಸವಲತ್ತುಗಳಿಗೆ ಅರ್ಹವಾಗಿದೆ. ಆದ್ದರಿಂದ ಅಲ್ಲಿಯವರು ವಿನಾಕಾರಣ, ಆರೋಗ್ಯ ಆರೈಕೆ, ಶಿಕ್ಷಣ ಮತ್ತು ಮೂಲ ಸೌಕರ್ಯಗಳಿಗಾಗಿ ದೆಹಲಿಯವರೆಗೆ ಹೋಗಿ ಬರುವುದನ್ನು ತಪ್ಪಿಸುವುದಕ್ಕಾಗಿ ಅಲ್ಲಿಯ ಜನರ ಅನುಕೂಲಕ್ಕಾಗಿ
ತಮ್ಮ ಪಕ್ಷ ಅಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದ ಕೇಜ್ರಿವಾಲ್, ತನ್ನ ಪಕ್ಷಕ್ಕೆ ಒಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಪರಿಷತ್ ಸಭಾಪತಿ ಫೈಟ್: ಧರ್ಮೇಗೌಡರನ್ನು ಎಳೆದಾಡಿದ ಕಾಂಗ್ರೆಸ್, ಗದ್ದಲ, ಕೋಲಾಹಲ, ಮತ್ತೆ ಮುಂದೂಡಿಕೆ..!?
ಇದೇ ವೇಳೆ ಉತ್ತರ ಪ್ರದೇಶದಲ್ಲಿರುವ ಪಕ್ಷಗಳ ಬಗ್ಗೆ ಮಾತನಾಡಿದ ಅವರು, ಉತ್ತರ ಪ್ರದೇಶದ ಎಲ್ಲ ಪಕ್ಷಗಳು ಭ್ರಷ್ಟಾಚಾರದ ವಿಷಯದಲ್ಲಿ ಪರಸ್ಪರರನ್ನು ಮೀರಿಸಿಹೋಗಿವೆ.
ಅವು ಜನರಿಗೆ ದ್ರೋಹ ಬರೆಯುತ್ತಿವೆ. ಹೀಗಾಗಿ ನಮಗೆ ಒಂದು ಅವಕಾಶ ನೀಡಿ, ನಾವು ಗೆದ್ದರೆ ಯಾರೂ ಮಾಡದ ಸಾಧನೆ ಮಾಡಿ ತೋರಿಸುತ್ತೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel