ನವಜೋತ್ ಸಿಂಗ್ ಸಿಧೂ ನನಗೆ ಹೊಡೆಯಲು ಬಂದಿಲ್ಲ …ಅವತ್ತು ಆಗಿದ್ದೇ ಬೇರೆ – ಅಮೀರ್ ಸೊಹೈಲ್
ಅದು 1996ರಲ್ಲಿ ನಡೆದಿದ್ದ ಶಾರ್ಜಾಕಪ್ ಪಂದ್ಯ. ಅದು ಕೂಡ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ. ಅಂದ ಮೇಲೆ ಹೇಳುವುದೇ ಬೇಡ. ಮೈದಾನದ ಹೊರಗಡೆ ಎಷ್ಟು ತೀವ್ರತೆ ಇರೊತ್ತೋ ಅಷ್ಟೇ ತೀವ್ರತೆ ಮೈದಾನದೊಳಗಡೆನೂ ಇರುತ್ತೆ. ಇಲ್ಲಿ ಸೋಲು ಅನ್ನೋದು ಎರಡು ತಂಡಗಳಿಗೂ ಬೇಕಾಗಿಲ್ಲ. ಗೆಲ್ಲಬೇಕು ಅಷ್ಟೇ. ಹಠ, ಛಲ, ಜಿದ್ದಿನಿಂದ ಉಭಯ ತಂಡಗಳ ಆಟಗಾರರು ಆಡುತ್ತಿರುತ್ತಾರೆ.
ಅಂತಹುದ್ದೇ ಒಂದು ಘಟನೆ ಈ ಪಂದ್ಯದಲ್ಲೂ ನಡೆದಿತ್ತು. ಬಹುಶಃ ನವಜೋತ್ ಸಿಂಗ್ ಸಿಧೂ ಮತ್ತು ಸಚಿನ್ ತೆಂಡುಲ್ಕರ್ ಆಗ ಟೀಮ್ ಇಂಡಿಯಾದ ಆರಂಭಿಕ ಆಟಗಾರರಾಗಿದ್ದರು. ನವಜೋತ್ ಸಿಂಗ್ 90ರ ಗಡಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅದೇನೊ ಸಿಟ್ಟು ಬಂತೋ ಗೊತ್ತಿಲ್ಲ. ನವಜೋತ್ ಸಿಂಗ್ ಸಿಧೂ ಅವರು ಏಕಾ ಏಕಿ ಅಮೀರ್ ಸೊಹೈಲ್ ಜೊತೆ ಜೋರಾಗಿ ಮಾತನಾಡುತ್ತಿದ್ದರು. ಸಿಧೂ ಕೈಯಲ್ಲಿ ಬ್ಯಾಟ್ ಹಿಡಿದು ಹೊಡೆಯುವ ಧಾಟಿಯಲ್ಲಿ ಮುಂದೆ ಮುಂದೆ ಹೋಗುತ್ತಾ ಮಾತನಾಡುತ್ತಿದ್ದರು. ಅಮೀರ್ ಸೊಹೈಲ್ ಕೂಲ್ ಆಗಿಯೇ ಸಿಧೂ ಕೋಪಕ್ಕೆ ಉತ್ತರ ನೀಡುತ್ತಿದ್ದರು. ಈ ಘಟನೆಯನ್ನು ಸಿಧೂ ಅವರು ಸೊಹೈಲ್‍ಗೆ ಹೊಡೆಯಲು ಹೋಗಿದ್ರು ಎಂಬಂತೆ ಸುದ್ದಿ ಮಾಡಲಾಗಿತ್ತು.
ಈ ಘಟನೆಯ ಬಗ್ಗೆ ಅಮೀರ್ ಸೊಹೈಲ್ ಅನೇಕ ಬಾರಿ ಸ್ಪಷ್ಟೀಕರಣ ಕೊಟ್ಟಿದ್ದರು. ಆದ್ರೆ ಸಿಧೂ ಮಾತ್ರ ಈ ಘಟನೆಯ ಬಗ್ಗೆ ಬೇರೆನೇ ಹೇಳುತ್ತಿದ್ದಾರೆ. ಹೀಗಾಗಿ ಅಮೀರ್ ಸೊಹೈಲ್ ಮತ್ತೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅಲ್ಲದೆ ಆ ದಿನದ ಘಟನೆ ಹೇಗಾಯ್ತು.. ಸಿಧೂ ಏನು ಹೇಳಿದ್ರು. ನಾನು ಹೇಳಿದ್ದೆ ಎಂಬುದನ್ನು ಯೂಟ್ಯೂಬ್ ಚಾನೆಲ್‍ನ ಲೈವ್ ಕಾರ್ಯಕ್ರಮದಲ್ಲಿ ಸೊಹೈಲ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಸಿಧೂ ಪಾಜಿ ಅವರು 90 ಗಡಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಇದಕ್ಕಿದ್ದಂತೆ ಸಿಧೂ ಅವರು ನನ್ನ ಬಳಿ ಸಿಟ್ಟಿನಿಂದಲೇ ಬಂದ್ರು. ಅಮೀರ್ ಪಾಜಿ ನಿನ್ನ ಬೌಲರ್‍ಗಳಿಗೆ ಬುದ್ಧಿ ಕಲಿಸು. ಅವನು ತಪ್ಪು ಮಾಡುತ್ತಿದ್ದಾನೆ ಎಂದ್ರು. ಆಗ ನಾನು ಏನಾಯ್ತು ಪಾಜಿ ಅಂದೆ. ಅದಕ್ಕೆ ಅವರು ಅವನು ನನ್ನನ್ನು ನಿಂದಿಸುತ್ತಿದ್ದಾನೆ ಅಂದ್ರು. ಆಗ ನಾನು ಪಾಜಿ ಅದನ್ನು ಬಿಟ್ಟು ಬಿಡಿ. ಆತ ವೇಗದ ಬೌಲರ್. ಅವರಿಗೆ ಮಾತನಾಡುವುದು ಅಭ್ಯಾಸವಾಗಿದೆ ಅಂದೆ. ಆಗ ಸಿಧೂ ಅವರು, ಅವರು ಇಲ್ಲ ಇಲ್ಲ ಅವನು ಏನು ಬೇಕಾದ್ರೂ ಹೇಳಲಿ. ಆದ್ರೆ ನಿಂದನೆ ಮಾಡಬಾರದು ಅಂದ್ರು. ಆಯ್ತು ಪಾಜಿ ನಾನು ಆತನಿಗೆ ಹೇಳುತ್ತೇನೆ ಅಂದಿದ್ದೆ. ಇದು ಅವತ್ತು ನಡೆದಿರುವ ಘಟನೆ. ಸಿಧೂ ಅವರಿಗೆ ಸ್ಲಡ್ಜಿಂಗ್ ಮಾಡಿದ್ದ ಬೌಲರ್ ವಾಕರ್ ಯೂನಸ್. ಆದ್ರೆ ಅವರು ಯಾಕೆ ಈ ಘಟನೆಯನ್ನು ಮತ್ತೆ ಮತ್ತೆ ಕೆಣಕುತ್ತಿದ್ದಾರೆ ಅಂತ ಗೊತ್ತಿಲ್ಲ. ಈ ಬಗ್ಗೆ ನಾನು ಅನೇಕ ಬಾರಿ ಸ್ಪಷ್ಟನೆ ನೀಡಿದ್ದೆ. ಇದೀಗ ಮತ್ತೊಮ್ಮೆ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಅಮೀರ್ ಸೊಹೈಲ್ ಹೇಳಿದ್ರು.
ಈ ಪಂದ್ಯದಲ್ಲಿ ನವಜೋತ್ ಸಿಂಗ್ ಅವರು ಆಕರ್ಷಕ 101 ರನ್ ದಾಖಲಿಸಿದ್ದರು. ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು.








