Aana
ಚಂದನವನದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು ಅದಿತಿ ಪ್ರಭುದೇವ. ಸಾಲು-ಸಾಲು ಸಿನಿಮಾಗಳ ಮೂಲಕ ಸುದ್ದಿಯಲ್ಲಿರುವ ಅದಿತಿ ಇದೀಗ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹೊಸ ಸಿನಿಮಾ ಇಡೀ ದೇಶದ ಗಮನ ಸೆಳೆದಿದೆ. ಹೌದು ಭಾರತದ ಮೊದಲ ಫೀಮೇಲ್ ಸೂಪರ್ಹೀರೋ ಸಿನಿಮಾ ಮಾಡುವುದಾಗಿ ಘೋಷಣೆಯಾಗಿತ್ತು. ಈ ಚಿತ್ರಕ್ಕೆ ಅದಿತಿ ಪ್ರಭುದೇವ ಅವರು ನಾಯಕಿಯಾಗಿದ್ದಾರೆ.
ಇನ್ನು ಚಿತ್ರದ ಫಸ್ಟ್ ಕೂಡ ರಿಲೀಸ್ ಆಗಿ ಅಭಿಮಾನಿಗಳ ಗಮನಸೆಳೆಯುತ್ತಿದೆ. ಫೀಮೇಲ್ ಸೂಪರ್ಹೀರೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೇವಲ ಆದಿತಿ ಲುಕ್ ಅಷ್ಟೇ ಅಲ್ಲ ಟೈಟಲ್ ಕೂಡ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಮನೋಜ್ ಪಿ ನಡುಲ ಮನೆ ಪೋಸ್ಟರ್ ಹಂಚಿಕೊಂಡಿದ್ದು ”ಬೆಂಕಿಯ ಜ್ವಾಲೆಗೆ ಧುಮುಕುವರಾರು? ಸುನಾಮಿ ಅಲೆಗಳ ಎದುರು ನಿಲ್ಲುವರಾರು? ಮಿಂಚಿನ ವೇಗವ ಮೀರಿಸುವವರಾರು? ಅವಳ ಶಕ್ತಿಯ ತಡ್ಯೋರ್ಯಾರು??? ಆಕೆ ಬರ್ತಾಯಿದ್ದಾಳೆ. ಆನ ” ಎಂದು ಬರೆದುಕೊಂಡಿದ್ದಾರೆ.
ಫಸ್ಟ್ ಲುಕ್ ನೋಡ್ತಿದ್ರೆ ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್, ಫ್ಯಾಂಟಸಿ ಸಿನಿಮಾ ಎಂದು ಅನಿಸುತ್ತಿದ್ದು, ಫೀಮೇಲ್ ಸೂಪರ್ ಹೀರೋ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಿರುತೆರೆಯಲ್ಲಿ ನಾಗಿಣಿಯಾಗಿ ಮಿಂಚಿದ ಅದಿತಿ ಬಳಿಕ ಸ್ಯಾಂಡಲ್ ವುಡ್ ಗೆ ಜಿಗಿದು ಇದೀಗ ಸಾಲು ಸಾಲು ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ.
Aana
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel