ಕ್ರಿಕೆಟ್ ನ ಸೂಪರ್ ಮ್ಯಾನ್ ಎಬಿಡಿ ರೀ ಎಂಟ್ರಿಗೆ ವೇದಿಕೆ ಸಜ್ಜು
ಮತ್ತೆ ಆಫ್ರಿಕಾ ಕ್ಯಾಪ್ ತೊಡಲಿದ್ದಾರೆ ಎಬಿಡಿ
ವಿಶ್ವ ಕ್ರಿಕೆಟ್ ನ ಸೂಪರ್ ಮ್ಯಾನ್. ಕ್ರಿಕೆಟ್ ದುನಿಯಾದ ಏಲಿಯನ್. ಮಿಸ್ಟರ್ 360 ಡಿಗ್ರಿ, ಒನ್ ಅಂಡ್ ಓನ್ಲಿ ಎಬಿಡಿ ವಿಲಿಯರ್ಸ್ ಆಟಕ್ಕೆ ಎಲ್ಲರೂ ಸಲಾಂ ಎನ್ನಲೇಬೇಕು. ಎಬಿಡಿ ವಿಲಿಯರ್ಸ್ ಕ್ರಿಕೆಟ್ ಜಗತ್ತು ಕಂಡುಕೇಳದ ಆಟಗಾರ, ಕ್ರಿಕೆಟ್ ಅಭಿಮಾನಿಗಳು ಕನಸ್ಸಲ್ಲೂ ಊಹಿಸದ ಆಟಗಾರ. ಆಧುನಿಕ ಕ್ರಿಕೆಟ್ ಗೆ ಹೊಸ ಭಾಷ್ಯ ಬರೆದ ತ್ರಿವಿಕ್ರಮ. ಕ್ರಿಕೆಟ್ ಗೆ ಹೊಸ ಟಚ್ ನೀಡಿದ ರಣಬೇಟೆಗಾರ.
ಈ ಹಿಂದೆ ಯಾರು ಕೇಳಿ ನೋಡಿರದ ಶೈಲಿಯಲ್ಲಿ ಬ್ಯಾಟ್ ಬೀಸುವ ಎಬಿಡಿಗೆ ಯಾರೂ ಸರಿಸಾಟಿಯೇ ಇಲ್ಲ. ಕ್ರೀಸ್ ನಲ್ಲಿ ಕಚ್ಚಿನಿಂತರೇ ಅಲ್ಲಿ ಬೌಂಡರಿ ಲೈನ್ ಗಳಲೇ ಚಿಕ್ಕದಾಗಿಬಿಡುತ್ತವೆ. ಚೆಂಡಿಗೆ ಅಷ್ಟದಿಕ್ಕುಗಳ ದರ್ಶನ ಮಾಡಿಸುವ ವಿಶ್ವದ ಏಕೈಕ ಬ್ಯಾಟ್ಸ್ ಮೆನ್ ಎಬಿಡಿಗೆ ಎಬಿಡಿನೇ ಸರಿಸಾಟಿ.
ಇಂಹತ ಅದ್ಭುತ ಆಟಗಾರನ ರೀ ಎಂಟ್ರಿಗೆ ಇದೀಗ ವೇದಿಕೆ ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯಲ್ಲಿ ಎಬಿಡಿ ಕಾಣಿಸಿಕೊಳ್ಳುವ ಬಗ್ಗೆ ಆಫ್ರಿಕಾ ತಂಡದ ನಿರ್ದೇಶಕ ಗ್ರೇಮ್ ಸ್ಮಿತ್ ಸುಳಿವೊಂದನ್ನು ನೀಡಿದ್ದಾರೆ.
ಹೌದು..! ಎಬಿಡಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ಮೂರು ವರ್ಷಗಳು ಕಳೆದಿದೆ. 2018ರಲ್ಲಿ ವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ನಂತರ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಫ್ರಾಂಚೈಸಿ ಟಿ20 ಲೀಗ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಭಾರತದಲ್ಲಿ ಐಪಿಎಲ್ ಆಡಿದ ಎಬಿಡಿ ಆರ್ ಸಿಬಿ ತಂಡದ ಪರ ಒಟ್ಟು 7 ಪಂದ್ಯಗಳಿಂದ 207 ರನ್ ಗಳಿಸಿದ್ದರು. ಈ ಎಲ್ಲಾ ಪ್ರದರ್ಶನವನ್ನು ಗಮನಿಸಿ ವಿಲಿಯರ್ಸ್ ಅವರನ್ನು ಮರಳಿ ಆಫ್ರಿಕಾ ತಂಡದಲ್ಲಿ ಸೇರಿಸಿಕೊಳ್ಳಲು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಿರ್ಧಾರ ಮಾಡಿದೆ.