ಆರ್ ಸಿಬಿಗೆ ಎಬಿಡಿ ವಿಲಿಯರ್ಸ್ ರಿಟರ್ನ್ಸ್ ABD saaksha tv
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಮತ್ತು ಆರ್‍ಸಿಬಿ ವಿಧ್ವಂಸಕ ಆಟಗಾರ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರೋದು ಗೊತ್ತೆ ಇದೆ. ಎಬಿಡಿ ವಿಲಿಯರ್ಸ್ ವಿದಾಯ ಘೋಷಿಸುತ್ತಿದ್ದಂತೆ ಎಲ್ಲರಿಗಿಂತಲೂ ಹೆಚ್ಚಾಗಿ ಆರ್ ಸಿಬಿ ಅಭಿಮಾನಿಗಳು ಶಾಕ್ ಗೆ ಒಳಗಾದರು.
ಆರ್ ಸಿಬಿ ಪಂದ್ಯ ಸೋಲಲಿ.. ಗೆಲ್ಲಲಿ ಅಲ್ಲಿ ಎಬಿಡಿ ಅಬ್ಬರ ಇದ್ದರೇ ಸಾಕು ಎಂದು ಎಷ್ಟೋ ಅಭಿಮಾನಿಗಳು ಮ್ಯಾಚ್ ನೋಡುತ್ತಿದ್ದರು. ಎಬಿಡಿಯ ಒಂದೊಂದು ಹೊಡೆತಕ್ಕೆ ಅಭಿಮಾನಿಗಳು ಹುಚ್ಚೇದ್ದು ಕುಣಿಯುತ್ತಿದ್ದರು. ಆದ್ರೆ ಆ ಸಂಭ್ರಮ ಸಡಗರ ಇನ್ಮುಂದೆ ನಡೆಯೋದಿಲ್ಲ. ಆದ್ರೆ ಎಬಿಡಿ ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ.
ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆಸಕ್ತಿಕರ ಸಂಗತಿವೊಂದನ್ನು ತಿಳಿಸಿದೆ.
ಅದೇನಂದರೇ ಮುಂದಿನ ಋತುವಿನಿಂದ ಎಬಿಡಿ ವಿಲಿಯರ್ಸ್ ಆರ್ ಸಿಬಿ ಡಗೌಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಈ ಬಾರಿ ಆಟಗಾರನಾಗಿ ಅಲ್ಲ. ಬದಲಿಗೆ ಆರ್ ಸಿಬಿ ತಂಡದ ಬ್ಯಾಟಿಂಗ್ ಸಲಹೆಗಾರರನ್ನಾಗಿ ವಿಲಿಯರ್ಸ್ ಮಿಂಚಲಿದ್ದಾರೆ.
ಈ ಬಗ್ಗೆ ಆರ್ ಸಿಬಿ ಫ್ರಾಂಚೈಸಿ, ಡೆವಿಲಿಯರ್ಸ್ ಜೊತೆ ಮಾತುಕತೆ ನಡೆಸಿದೆ ಅಂತೆ. ಇದಕ್ಕೆ ಮಿಸ್ಟರ್ 360 ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯವಾಗಿ ಕ್ರಿಕೆಟ್ ನಿಂದ ದೂರ ಉಳಿದಿರುವ ಡೆವಿಲಿಯರ್ಸ್ ಆರ್ ಸಿಬಿಗಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಲು ಸಿದ್ಧರಿದ್ದರಂತೆ.
ಡಿವಿಲಿಯರ್ಸ್ ಅವರಂತಹ ಆಟಗಾರನಿಗೆ ಬ್ಯಾಟಿಂಗ್ ಕೋಚ್ ಹುದ್ದೆ ನೀಡಿದರೆ ನಮ್ಮ ತಂಡದ ಆಟಗಾರರಿಗೆ ತುಂಬಾ ಉಪಯೋಗವಾಗಲಿದೆ ಎಂದು ಆರ್ ಸಿಬಿ ಹೆಡ್ ಕೋಚ್ ಸಂಜಯ್ ಬಂಗಾರ್ ತಿಳಿಸಿದ್ದಾರೆ.
ಇನ್ನು ಪ್ರತಿ ತಂಡಕ್ಕೂ ಮುಖ್ಯ ಕೋಚ್‍ಗಿಂತ ಬ್ಯಾಟಿಂಗ್ ಕೋಚ್ ಅಗತ್ಯವಿದೆ. ಅದಕ್ಕಾಗಿಯೇ ನಾವು ಡಿವಿಲಿಯರ್ಸ್ ಅವರನ್ನು ಬ್ಯಾಟಿಂಗ್ ಕೋಚ್ ಅಥವಾ ಸಲಹೆಗಾರರನ್ನಾಗಿ ನೇಮಿಸಲು ಚಿಂತನೆ ನಡೆಸಿದ್ದೇವೆ ಎಂದಿದ್ದಾರೆ ಬಂಗಾರ್.









