Abhay Patil – ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ
ಬೆಳಗಾವಿ : ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಭಯ ಪಾಟೀಲ್, ನಾನು ಮಂತ್ರಿ ಸ್ಥಾನದ ಅಪೇಕ್ಷಿತ ಇಲ್ಲ.
ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹೇಳಿದರು.
ಉಮೇಶ್ ಕತ್ತಿ ಸ್ಥಾನ ತುಂಬುವಂತಹ ಸಮರ್ಥ ನಾಯಕರು ಜಿಲ್ಲೆಯಲ್ಲಿ ಇದ್ದಾರೆ.
ಆ ನಾಯಕತ್ವ ಯಾರಿಗೆ ನೀಡಬೇಕು ಎನ್ನುವುದನ್ನ ವರಿಷ್ಠರು ತೀರ್ಮಾನ ಮಾಡ್ತಾರೆ.
ಯಮಕನಮರಡಿ ಮತಕ್ಷೇತ್ರದಲ್ಲಿ ಉಮೇಶ್ ಕತ್ತಿ ಸಹೋದರ ನಾಲ್ಕು ಜಿಪಂ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡ್ತಾರೆ.
ರಮೇಶ್ ಕತ್ತಿ ಸೇರಿ ಅವರ ಪುತ್ರರು ಪಕ್ಷ ಸಂಘಟನೆ ಮಾಡ್ತಾರೆ. ಉಮೇಶ್ ಕತ್ತಿ ಸ್ಥಾನವನ್ನ ತುಂಬ ಶಕ್ತಿ ಕತ್ತಿ ಕುಟುಂಬಕ್ಕೆ ಇದೇ. ಈಗಾಗಲೇ ಈ ಬಗ್ಗೆ ವರಿಷ್ಠರು ಹೇಳಿದ್ದಾರೆ.
ಕತ್ತಿ ಕುಟುಂಬ ಇನ್ನೂ ದುಃಖದಲ್ಲಿದೆ. ಆ ಬಳಿಕ ರಮೇಶ್ ಕತ್ತಿ ಯಮಕನಮರಡಿ ಮತಕ್ಷೇತ್ರದಲ್ಲಿ ಸಂಘಟನೆ ಆರಂಭಿಸುತ್ತಾರೆ ಎಂದು ಹೇಳಿದ್ದಾರೆ.