ಶೂಟಿಂಗ್ ವೇಳೆ ಗಾಯಗೊಂಡ ಅಭಿಷೇಕ್ – ಲೀಲಾವತಿ ಆಸ್ಪತ್ರೆಗೆ ಹೊರಗೆ ಕಾಣಿಸಿಕೊಂಡ ಬಿಗ್ ಬಿ..!
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಶೂಟಿಂಗ್ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಅವರ ಕೈಗೆ ಗಂಭೀರವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಆದ್ರೆ ಅಧಿಕೃತವಾಗಿ ಈ ಮಾಹಿತಿ ಪ್ರಸಾರವಾಗಿಲ್ಲ.. ಇನ್ನೂ ಇದೀಗ ಮುಂಬೈನ ಲೀಲಾವತಿ ಆಸ್ಪತ್ರೆಯ ಹೊರಗೆ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಪುತ್ರಿ ಶ್ವೇತಾ ಬಚ್ಚನ್ ನಂದಾ ಅವರು ಕಾಣಿಸಿಕೊಂಡಿದ್ದಾರೆ.
ಹೀಗಾಗಿ ಗಾಯಗೊಂಡಿರುವ ಅಭಿಷೇಕ್ ಬಚ್ಚನ್ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ಬಂದಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ತಮಿಳಿನ ಓಟು ಸೇರಪ್ಪು ಸೈಜ್ 7 ಸಿನಿಮಾದ ಹಿಂದಿ ರೀಮೇಕ್ ನಲ್ಲಿ ಅಭಿಷೇಕ್ ಬಚ್ಚನ್ ನಾಯಕನಾಗಿ ನಟಿಸುತ್ತಿದ್ದಾರೆ.. ಇದೇ ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇನ್ನೂ ಘಟನೆ ನಡೆದ ವೇಳೆ ಐಶ್ವರ್ಯಾ ರೈ ಶೂಟಿಂಗ್ ಒಂದಕ್ಕಾಗಿ ಮಧ್ಯಪ್ರದೇಶದಲ್ಲಿದ್ದರು .. ಪತಿಗೆ ಗಾಯವಾದ ವಿಚಾರ ತಿಳಿದ ತಕ್ಷಣ ಖಾಸಗಿ ಜೆಟ್ ಮೂಲಕ ಮುಂಬೈಗೆ ದೌಡಾಯಿಸಿದ್ದರು. ಈ ವೇಳೆ ಕ್ಯಾಮೆರಾ ಕಣ್ಣಿಗೆ ಮಗಳ ಜೊತೆಗೆ ಕಾಣಿಸಿಕೊಂಡಿದ್ದರು.
ಕಾಂಚನಾ-3 ಸಿನಿಮಾದ ನಟಿ ಅಲೆಕ್ಸಾಂಡ್ರಾ ಶವ ಪತ್ತೆ







