28 ಮನೆ 16 ನಿವೇಶನ, ಭ್ರಷ್ಟ ಅಧಿಕಾರಿ ಪರಪ್ಪನ ಅಗ್ರಹಾರದ ಜೈಲಿಗೆ
ಎಸಿಬಿ( ಭ್ರಷ್ಟಾಚಾರ ನಿಗ್ರಹ ದಳ ) ರೈಡ ಗೆ (ACB Raid) ಒಳಗಾಗಿದ್ದ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೆಶಕ ವಾಸುದೇವ್ ಅವರನ್ನ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಆದಾಯಕ್ಕಿಂತ 1,408% ನಷ್ಟು ಹೆಚ್ಚು ಆಸ್ತಿಯನ್ನ ಹೊಂದಿರುವ ಆಧಾರದ ಮೇಲೆ ಅಧಿಕಾರಿಗಳು ವಾಸುದೇವ್ ಅವರನ್ನ ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದ್ದಾರೆ. ಅತಿ ಹೆಚ್ಚು ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದ್ದು,
ವಿಚಾರಣೆಯಲ್ಲಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಸಹಕಾರ ನೀಡಲಿಲ್ಲ ಎನ್ನುವ ಕಾರಣಕ್ಕೆ ಆರೋಪಿಯನ್ನ ಬಂಧಿಸಲಾಗಿದೆ. ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ ಕೋಟ್ಯಾಂತ ಆಸ್ತಿ ಮಾಡಿದ್ದು ಬೇನಾಮಿ ವ್ಯವಹಾರ ಮಾಡಿರುವ ಅನುಮಾನಗಳು ವ್ಯಕ್ತವಾಗಿದೆ.
ಕುಟುಂಬಸ್ಥರ ಹೆಸರಿನಲ್ಲಿ ಒಟ್ಟು 28 ಮನೆಗಳು 16 ಖಾಲಿ ಸೈಟ್ ಹೊಂದಿದ್ದಾರೆ ಮತ್ತು ಬೆಂಜ್ ಸ್ಕೋಡಾ ವೋಲ್ವೋ ಸೇರಿದಂತೆ 5 ಐಷಾರಾಮಿ ಕಾರುಗಳು ಮತ್ತು ಕೋಟಿಗಟ್ಟಲೆ ಬೆಳ್ಳಿ ಚಿನ್ನ ಆಭರಣಗಳನ್ನ ವಾಸುದೇವನ್ ಹೊಂದಿದ್ದಾರೆ.








