16 ವರ್ಷದ ಬಾಲಕಿಯ ಮೇಲೆ ಶಾಲಾ ಬಸ್ ಹರಿದು , ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಬನಶಂಕರಿ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ನಡೆದಿದೆ.. ಹಾರೋಹಳ್ಳಿ ನಿವಾಸಿಯಾಗಿದ್ದ ಬಾಲಕಿ ಕೀರ್ತನ ಮೃತ ದುರ್ದೈವಿಯಾಗಿದ್ದಾಳೆ.
ಈಕೆ ಸ್ನೇಹಿತರೊಂದಿಗೆ ಬೈಕ್ ನಲ್ಲಿ ತ್ರಿಪಲ್ ರೈಡ್ ಹೋಗುತ್ತಿದ್ದ ವೇಳೆ ಹಿಂಬಂದಿಯಿಂದ ಬಂದಿರುವ ಶಾಲಾ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ.. ಬಾಲಕಿ ಕೆಳಗೆ ಬಿದ್ದಾಗ ಆಕೆಯ ಮೇಲೆ ಬಸ್ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು , ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ಧಾರೆ.. ಹರ್ಷಿತ , ದರ್ಶನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ಧಾರೆ…
ಡೆಲ್ಲಿ ಪಬ್ಲಿಕ್ ಶಾಲೆ ಬಸ್ ಬಾಲಕಿ ಮೇಲೆ ಹರಿದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.. ಈ ಸಂಬಂಧ ನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..








