ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ Saaksha Tv
ಲಂಡನ್: ವಿಮಾನ ನಿಲ್ದಾಣದ ರನ್ವೇಯಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ಲಂಡನ್ನ ಹಿಥ್ರೋ ವಿಮಾನ ನಿಲ್ದಾಣದಲ್ಲಿ ನಡೆದಿದೆ .
ಸೋಮವಾರ ಸ್ಕಾಟಲ್ಯಾಂಡ್ನಿಂದ ಪ್ರಯಾಣಿಕರ ಹೊತ್ತು ಬ್ರಿಟಿಷ್ ಏರ್ವೇಸ್ ವಿಮಾನ ಪ್ರಯಾಣ ಬೆಳಸಿತ್ತು. ಇದು ಲಂಡನ್ನ ಹಿಥ್ರೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಲ್ಯಾಡಿಂಗ್ ವೇಳೆ ಭಾರೀ ಗಾಳಿ ಬೀಸಿದ ಪರಿಣಾಮ ವಿಮಾನ ರನ್ವೇಗೆ ಇನ್ನೇನು ಅಪ್ಪಳಿಸಲಿತ್ತು.
ಆದರೆ ಫೈಲಟ್ ಸಮಯ ಪ್ರಜ್ಞೆ ಮೆರೆದು, ತಕ್ಷಣವೇ ವಿಮಾನವನ್ನು ಟೇಕ್ ಆಫ್ ಮಾಡಿದ್ದಾರೆ. ಇದರಿಂದಾಗಿ ದುರಂತ ತಪ್ಪಿದೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿಸಲಾಗಿದೆ. ಎದೆ ನಡುಗಿಸುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಮ್ಮ ಪೈಲಟ್ಗಳು ಉತ್ತಮ ತರಬೇತಿ ಪಡೆದಿದ್ದಾರೆ. ಇಂತಹ ಸಂದಿಗ್ಧ ಹಾಗೂ ಹವಾಮಾನ ವೈಫರೀತ್ಯದಲ್ಲೂ ಉತ್ತಮ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬ್ರಿಟಿಷ್ ಏರ್ವೇಯ್ಸ್ ವಕ್ತಾರರು ತಿಳಿಸಿದ್ದಾರೆ.









