National : ಪುಣೆ – ಮುಂಬೈ ಹೆದ್ದಾರಿಯಲ್ಲಿ ಸರಣಿ ಅಪಘಾತ – ನಾಲ್ವರ ಸಾವು..
ಪುಣೆ ಮತ್ತು ಮುಂಬೈ ಎಕ್ಸ್ ಪ್ರಸ್ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಫಘಾತದಲ್ಲಿ 8 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಈ ಅಫಘಾತದಲ್ಲಿ ಪರಸ್ಪರ 6 ವಾಹನಗಳು ಡಿಕ್ಕಿ ಹೊಡೆದುಕೊಂಡಿವೆ. ಟ್ರಕ್ ಮತ್ತು ಕಂಟೈನರ್ ನಡುವೆ ಕಾರು ಅಪ್ಪಚ್ಚಿಯಾಗಿದ್ದು ಕಾರಿನಲ್ಲಿದ್ದವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಹೆದ್ದಾರಿ ಪೊಲೀಸರ ಪ್ರಕಾರ, ಎಕ್ಸ್ಪ್ರೆಸ್ವೇಯಲ್ಲಿ ಪುಣೆ-ಮುಂಬೈ ಲೇನ್ನಲ್ಲಿ ಬೆಳಿಗ್ಗೆ 6.40 ಕ್ಕೆ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಎರಡು ಲಾರಿ, ಕಂಟೈನರ್, ಎರಡು ಕಾರು ಹಾಗೂ ಟೆಂಪೋ ಜಖಂಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಹೆದ್ದಾರಿ ಪೊಲೀಸರು ಸ್ಥಳಕ್ಕಾಗಮಿಸಿ ಒಂದು ಗಂಟೆ ಕಾಲ ಎಲ್ಲ ವಾಹನಗಳನ್ನು ಬಂದ್ ಮಾಡಿ ರಸ್ತೆ ಸಂಚಾರ ತೆರವುಗೊಳಿಸಿದ್ದಾರೆ. ಮೃತ ಪಟ್ವರನ್ನ ಗೌರವ್ ಖಾರತ್ (36), ಸೌರಭ್ ತುಳಸಿ (32), ಸಿದ್ಧಾರ್ಥ್ ರಾಜ್ಗುರು (31) ದು ಗುರುತಿಸಲಾಗಿದೆ. accident on Mumbai-Pune Expressway: Car crushed between truck and container, 4 killed,
ಹೆದ್ದಾರಿಯಲ್ಲಿ ಅತಿವೇಗದಲ್ಲಿ ಸಾಗುತ್ತಿದ್ದ ಕಂಟೈನರ್ ಟೈರ್ ಪಂಕ್ಚರ್ ಆಗಿ ರಸ್ತೆ ಮಧ್ಯೆ ನಿಂತಿದೆ. ಈ ವೇಳೆ ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿಗೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಬಳಿಕ ಕಾರು, ಟೆಂಪೋ ಹಾಗೂ ಲಾರಿ ಒಂದೊಂದಾಗಿ ಡಿಕ್ಕಿ ಹೊಡೆದಿದೆ. ಬಹುತೇಕ ಸಣ್ಣ ವಾಹನಗಳು ಜಖಂಗೊಂಡಿವೆ.. ಎಲ್ಲಾ ಗಾಯಾಳುಗಳನ್ನು ಖೋಪೋಲಿ ನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರ ಭದ್ರತಾ ಪಡೆ, ಏಂಜಲ್ ರಕ್ಷಣಾ ತಂಡ ಮತ್ತು ಖೋಪೋಲಿ, ಖಂಡಾಲಾ, ಹೆದ್ದಾರಿ ಪೊಲೀಸರು ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.
Maharashtra | Four people killed after a speeding truck lost control & collided with several vehicles stuck in slow traffic along the Mumbai-Pune Expressway in Khopoli, Raigad, at 6:30am today; 7 people were injured, of which 4 people were shifted to a hospital: Expressway Police pic.twitter.com/2U7sgFMrP6
— ANI (@ANI) February 15, 2022








