ಮಂಗಳೂರು: ಕೇರಳದ ತಿರುವನಂತಪುರಂಗೆ ಮಂಗಳೂರಿನಿಂದ ಹೊರಟಿದ್ದ ಮಂಗಳೂರು-ತಿರುವನಂತಪುರಂ-ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

ಮಂಗಳೂರಿನಿಂದ ಹೊರಟಿದ್ದ ರೈಲು ಕಾಸರಗೋಡು ದಾಟಿತ್ತು. ಕೇರಳ ರಾಜಧಾನಿ ತಿರುವನಂತಪುರ ತಲುಪಲು ಇನ್ನು ಕೇವಲ 40 ಕಿ.ಮೀ ಬಾಕಿ ಇತ್ತು. ರೈಲು ಕಾಸರಗೋಡು ನಂತರ ವರ್ಕುಲ ಹಾಗೂ ಪರವೂರ್ ನಿಲ್ದಾಣಗಳ ನಡುವೆ ರೈಲು ಸಂಚರಿಸುತ್ತಿದ್ದಾಗ ಪಾರ್ಸೆಕ್ ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿ ಭಾರಿ ಅನಾಹುತ ತಪ್ಪಿಸಿದ್ದಾರೆ.

ತಕ್ಷಣವೇ ಬೆಂಕಿ ತಗುಲಿದ ಬೋಗಿಯನ್ನು ಬೇರ್ಪಡಿಸಿ ಅಗ್ನಿಶಾಮಕ ದಳ ಮತ್ತು ಪ್ರಯಾಣಿಕರ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆಸಲಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








