ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಯೊಳಗೆ ಬಿದ್ದ ಭಾರತದ ಕ್ಷಿಪಣಿ – Saaksha Tv
ಪಾಕಿಸ್ತಾನ: ಭಾರತೀಯ ಸೂಪರ್ಸಾನಿಕ್ ಕ್ಷಿಪಣಿ ಉಡಾವಣೆಯಾಗಿ, ಕ್ಷಿಪಣಿ ಪಾಕಿಸ್ತಾನದಲ್ಲಿ ಬಂದು ಬಿದ್ದಿದೆ ಎಂದು ಪಾಕಿಸ್ತಾನ ಆರೋಪ ಮಾಡಿದೆ.
ಈ ಕುರಿತು ಶುಕ್ರವಾರ ಪಾಕಿಸ್ತಾನದ ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಇದಕ್ಕೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇಂದು ಪ್ರತಕ್ರಿಯಿಸಿದ ಭಾರತ ಸರ್ಕಾರ, ಇದು ಆಕಸ್ಮಿಕವಾಗಿ ಉಡಾವಣೆ ಆಗಿದೆ.
ಮಾರ್ಚ್ 9 ರಂದು ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆ ಆಗಿತ್ತು. ಘಟನೆಯು ತೀವ್ರ ವಿಷಾದನೀಯವಾಗಿದ್ದರೂ, ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ ಎಂದು ರಕ್ಷಣಾ ಸಚಿವಾಲಯ ಇಂದು ಹೇಳಿಕೆಯಲ್ಲಿ ತಿಳಿಸಿದೆ.
#BREAKING: India says it accidentally fired a missile due to technical malfunction which landed in an area of Pakistan. Incident is deeply regretted.
The Government of India has taken a serious view and ordered a high-level Court of Enquiry. pic.twitter.com/hvmsIJRJIQ
— Aditya Raj Kaul (@AdityaRajKaul) March 11, 2022
ಭಾರತದ ಕ್ಷಿಪಣಿ ತನ್ನ ಗಡಿಯೊಳಗೆ ಬಿದ್ದಿದ್ದನ್ನು ಪಾಕಿಸ್ತಾನ ವಿರೋಧಿಸಿದ್ದು, ಅಲ್ಲಿನ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಕರೆಯಿಸಿಕೊಂಡು ವಿಚಾರಣೆ ನಡೆಸಿದೆ. ತನ್ನ ವಾಯುಪ್ರದೇಶದಲ್ಲಿ ಅಪ್ರಚೋದಿತವಾಗಿ ಕ್ಷಿಪಣಿ ದಾಳಿಯಾಗಿದೆ. ಘಟನೆಯ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ವರದಿ ನೀಡಬೇಕು ಎಂದು ಪ್ರತಿಭಟನೆ ವ್ಯಕ್ತಪಡಿಸಿದೆ.
ಮಾರ್ಚ್ 9 ರಂದು ಸಂಜೆ 6:43 ಕ್ಕೆ ಭಾರತದ ಸೂರತ್ಗಢದಿಂದ ಭಾರತೀಯ ಸೂಪರ್ಸಾನಿಕ್ ಫ್ಲೈಯಿಂಗ್ ಆಬ್ಜೆಕ್ಟ್ ಪಾಕಿಸ್ತಾನಕ್ಕೆ ಪ್ರವೇಶಿಸಿದೆ. ಈ ಘಟನೆಯ ಬಗ್ಗೆ ಭಾರತದ ಚಾರ್ಜ್ ಡಿಅಫೇರ್ಸ್ ಎಂ ಸುರೇಶ್ ಕುಮಾರ್ ಅವರಿಗೆ ಗುರುವಾರ ರಾತ್ರಿ ತಿಳಿಸಲಾಗಿದೆ. ಇಂತಹ ನಿರ್ಲಕ್ಷ್ಯದ ಅಹಿತಕರ ಪರಿಣಾಮಗಳ ಬಗ್ಗೆ ಎಚ್ಚರದಿಂದಿರಬೇಕು.
ಭಾರತೀಯ ಸೂಪರ್ಸಾನಿಕ್ ಕ್ಷಿಪಣಿಯು ಸಿರ್ಸಾದಿಂದ ಉಡಾವಣೆಗೊಂಡು ಪಾಕಿಸ್ತಾನದ ಭೂಪ್ರದೇಶದ ಸುಮಾರು 124 ಕಿ.ಮೀ. ದೂರದಲ್ಲಿರುವ, ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ಬಳಿ ಇಳಿಯಿತು ಎಂದು ಹೇಳಿದ ಒಂದು ದಿನದ ನಂತರ ಭಾರತದಲ್ಲಿ ಹೇಳಿಕೆ ಬಂದಿದೆ. ಕ್ಷಿಪಣಿಯು 40,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿದೆ. ಭಾರತೀಯ ಮತ್ತು ಪಾಕಿಸ್ತಾನ ವಾಯುಪ್ರದೇಶದಲ್ಲಿ ಪ್ರಯಾಣಿಕರ ವಿಮಾನಗಳು ಮತ್ತು ನೆಲದ ಮೇಲಿನ ನಾಗರಿಕರ ಆಸ್ತಿಗೆ ಅಪಾಯ ತರುತ್ತಿತ್ತು ಎಂದು ಹೇಳಿದ್ದಾರೆ.








