ಆ್ಯಸಿಡ್ ದಾಳಿ ಮನುಷ್ಯ ಸಮಾಜ ತಲೆ ತಗ್ಗಿಸುವಂತಹದು : ಹಾಲಪ್ಪ ಆಚಾರ
ಕೊಪ್ಪಳ: ಯುವತಿ ಮೇಲೆ ಆ್ಯಸಿಡ್ ದಾಳಿ ಮನುಷ್ಯ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ಬೇಸರ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಜ್ಞಾವಂತ ಸಮಾಜದಲ್ಲಿ ಇಂಥ ಕ್ರಿಮಿಗಳು ಇರೋದು ತಲೆ ತಗ್ಗಿಸುವಂತಹ ವಿಷಯವಾಗಿದೆ. ಇಂಥವರಿಗೆ ಕಾನೂನು ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ಆಗುವಂತೆ ಕಾಯ್ದೆ ಬದಲಾಗಬೇಕಿದೆ. ಸಣ್ಣ ಯವಸ್ಸಿನ ಯುವತಿ ಮೇಲೆ ಇಂಥ ಕೃತ್ಯ ನಡೆದಿರೋದು ಬೇಸರದ ಸಂಗತಿ. ಈ ಬಗ್ಗೆ ಎಲ್ಲರೂ ಕನಿಕರ ಪಡಬೇಕಿದೆ ಎಂದು ಕನಿಕರ ವ್ಯಕ್ತಪಡಿಸಿದರು.
ಇನ್ನೂ ಯುವಕತಿ ಕುಟುಂಬಕ್ಕೆ ನಾನು ವೈಯುಕ್ತಿಕವಾಗಿ 1 ಲಕ್ಷ ರೂ. ನೀಡಿದ್ದೇನೆ. ಅಲ್ಲದೇ ಸರ್ಕಾರದಿಂದ ಅಗತ್ಯ ಪರಿಹಾರ ಮತ್ತು ಸೌಲಭ್ಯ ನೀಡಲಾಗುವುದು. ಹಾಗೇ ಹಿರಿಯ ಅಧಿಕಾರಿಗಳನ್ನ ಆಸ್ಪತ್ರೆಗೆ ಕಳುಹಿಸಿದ್ದೇನೆ. ನಾನೂ ಕೂಡ ಭೇಟಿ ನೀಡಿ, ಕುಟುಂಬಕ್ಕೆ ದೈರ್ಯ ಹೇಳುತ್ತೇನೆ ಎಂದರು.
ಹಾಗೇ ಇನ್ನೊಮ್ಮೆ ಯಾರೂ ಇಂಥ ಕೃತ್ಯ ಎಸಗದಂತೆ ಆರೋಪಿಗೆ ಶಿಕ್ಷೆ ಆಗಬೇಕು. ಇಂಥಹ ಮಾನಸಿಕ ಅಸ್ವಸ್ಥ ಹುಚ್ಚರಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ಹೇಳಿದರು.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರವಾಗಿ ಮಾತನಾಡಿ ಸಿಎಂ ಈಗಾಗಲೇ ಸೂಕ್ತ ತನಿಖೆ ಮಾಡಿ, ಶಿಕ್ಷಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಪ್ರಿಯಾಂಕ್ ಖರ್ಗೆ ಅವರು ಸ್ವತಃ ತಾವೇ ನನ್ನ ಬಳಿ ದಾಖಲೆ ಇವೆ ಎಂದಿದ್ದರು. ಈ ವಿಷಯವನ್ನು ಮೀಡಿಯಾ ಮುಂದೆ ಬಂದು ತಾವೇ ಹೇಳಿದ್ದರು. ದಾಖಲೆ ಇದ್ದರೆ ತನಿಖಾ ಅಧಿಕಾರಿಗಳಿಗೆ ನೀಡಬೇಕು, ಇವರಿಗೆ ಏನು ಕಷ್ಟ ಎಂದು ಪ್ರಶ್ನಿಸಿದರು.
ಅವರು ಮೀಡಿಯಾ ಮುಂದೆ ಹೇಳಿ, ಕಾಗದದ ಹುಲಿ ಆಗಬಾರದು. ತನಿಖೆ ಅಧಿಕಾರಿಗಳಿಗೆ ಮಾಹಿತಿ ಬೀಡುವುದು ಬಿಟ್ಟು, ಬೇಜವಾಬ್ದಾರಿಯಿಂದ ಮಾತಾಡುತ್ತಾ ಇದ್ದಾರೆ. ಪ್ರಿಯಾಕ್ ಪ್ರಬುದ್ಧವಾಗಿ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.