ಪೊಲೀಸರ ಮುಂದೆ ಆಸಿಡ್ ನಾಗ ಪಶ್ಚಾತಾಪ – ಯುವತಿ ಒಪ್ಪಿದ್ರೆ ಮದುವೆ ಆಗ್ತೀನಿ ಎಂದ…
ಬೆಂಗಳೂರಿನಲ್ಲಿ ಯುವತಿ ಮೇಲೆ ಅಸಿಡ್ ಎರಚಿ ಸದ್ಯ ಜೈಲು ಕಂಬಿ ಎಣಿಸುತ್ತಿರುವ ಆ್ಯಸಿಡ್ ನಾಗ ಪೊಲೀಸರ ಮುಂದೆ ಪಶ್ಚಾತ್ತಾಪದ ಮಾತುಗಳನ್ನ ಆಡಿದ್ದಾನೆ. ಆ ಹುಡುಗಿಗೆ ಆ್ಯಸಿಡ್ ಹಾಕಬೇಕು ಅಂತ ಕನಸು ಮನಸಲ್ಲೂ ಯೋಚಿಸಿರಲಿಲ್ಲ. ನಾನು ಇಂತಾ ಅನ್ಯಾಯ ಮಾಡಬಾರದಿತ್ತು. ನಾನು ಮಾಡಿರೋದು ತಪ್ಪು ಅಂತ ನಾಗ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾನೆ. ಕಾಮಾಕ್ಷಿಪಾಳ್ಯ ಪೋಲೀಸ್ರು ಆ್ಯಸಿಡ್ ನಾಗೇಶನ ಸ್ಟೇಟ್ ಮೆಂಟ್ ದಾಖಲಿಸಿದ್ದಾರೆ.
ಆ್ಯಸಿಡ್ ಹಾಕುವ ಮನಸ್ಸು ನನಗಿರಲಿಲ್ಲ. ನಾನು ಪ್ರೀತಿಸಿದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಅಂತ ಹೀಗೆ ಮಾಡಿದೆ. ಆದರೆ ಈಗ ಆ್ಯಸಿಡ್ ಹಾಕಿ ಪ್ರತಿಕ್ಷಣ ಸತ್ತು ಬದುಕುತ್ತಿದ್ದೇನೆ. ನಾನು ಯುವತಿ ಕಾಲೇಜಿನಲ್ಲಿದ್ದಾಗಲೇ ಲವ್ ಮಾಡಿದ್ದೆ. ಕಾಲೇಜಿನಲ್ಲೂ ಕೂಡ ಯುವತಿಯನ್ನು ಫಾಲೋ ಮಾಡುತ್ತಿದ್ದೆ. ಯಾರಾದರೂ ನನ್ನ ಹುಡುಗಿ ಮೇಲೆ ಕಣ್ಣು ಹಾಕಿದರೆ ವಾರ್ನಿಂಗ್ ಕೊಡುತ್ತಿದ್ದೆ. ಒನ್ ಸೈಡ್ ಲವ್ ಅಂತ ಗೊತ್ತಾಗುತ್ತಿದ್ದಂತೆ ಹುಚ್ಚನಾಗಿಬಿಟ್ಟಿದ್ದೆ ಎಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ನಾನು ಮಾಡಿದ ತಪ್ಪಿಗೆ ಸದ್ಯ ನನಗೆ ಸಿಕ್ಕಿರೋ ಶಿಕ್ಷೆ ಕಡಿಮೆ ನಮ್ಮ ಅಣ್ಣ ಮನೆಯವರು ಬೈದಿದ್ದಕ್ಕೆ ಹಾಗೇ ಮಾಡಿಬಿಟ್ಟೆ. ಅದು ಬಿಟ್ಟು ಬೇರೆನೂ ಕಾರಣ ಇಲ್ಲ ಎಂದು ಆಸಿಡ್ ನಾಗ ಹೇಳಿದ್ದಾನೆ.
ನಾನು ಆ್ಯಸಿಡ್ ಹಾಕಿರುವ ಹುಡುಗಿಗೆ ನಾನೇ ಲೈಫ್ ಕೊಡುತ್ತೇನೆ. ಆದರೆ ಆ ಯುವತಿ ಹಾಗೂ ಅವರ ಮನೆಯವರು ಒಪ್ಪಬೇಕು. ಆಕೆಯನ್ನು ಮದುವೆಯಾಗುವ ಅರ್ಹತೇನೂ ನನಗಿಲ್ಲ ಎಂದು ತಿಳಿಸಿದ್ದಾನೆ.








