Act 1978
ಲಾಕ್ ಡೌನ್ ಬಳಿಕ ತೆರೆಗಪ್ಪಳಿಸಿದ ಮೊದಲ ಸಿನಿಮಾ ‘ಆಕ್ಟ್ 1978’
ಕೊರೊನಾ ಮಹಾಮಾರಿಯಿಂದ ತೀವ್ರವಾಗಿ ಪೆಟ್ಟು ತಿಂದ ಉದ್ಯಮಗಳಲ್ಲಿ ಚಿತ್ರೋದ್ಯಮ ಸಹ ಒಂದು. ಸತತ 7-8 ತಿಂಗಳುಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ಅಕ್ಟೋಬರ್ 15ರಿಂದ ಮತ್ತೆ ಕಾರ್ಯಾರಂಭಿಸಿವೆ. ಆದ್ರೆ ಯಾವುದೇ ಹೊಸ ಸಿನಿಮಾಗಳ ಬಿಡುಗಡೆ ಮಾಡಿರಲಿಲ್ಲ. ಬದಲಾಗಿ ಈ ಹಿಂದೆಯೇ ರಿಲೀಸ್ ಆಗಿ ಸಕ್ಸಸ್ ಕಂಡಿದ್ದ ಸಿನಿಮಾಗಳು ರೀರಿಲೀಸ್ ಆಗಿ ಪ್ರದರ್ಶನ ಕಾಣ್ತಿವೆ. ಆದ್ರೆ ಇಂದು ದಕ್ಷಿಣ ಭಾರತದ ಮೊದಲ ಸಿನಿಮಾ ಅದ್ರಲ್ಲೂ ಕನ್ನಡದ ಸಿನಿಮಾ ಥಿಯೆಟರ್ ಗೆ ಲಗ್ಗೆ ಇಟ್ಟಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಲಾಕ್ ಡೌನ್ ಬಳಿಕ ಬಿಡುಗಡೆಯಾದ ಮೊದಲ ಸಿನಿಮಾವೆಂಬ ಕೀರ್ತಿಗೂ ಪಾತ್ರವಾಗಿದೆ.
ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ತೆರೆಕಾಣುತ್ತಿದೆ. ನೂರಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಈ ಚಿತ್ರ ಪ್ರದರ್ಶನವಾಗುತ್ತಿದೆ. ಸುದೀರ್ಘ ವನವಾಸದ ನಂತರ ಮೊದಲ ಸಿನಿಮಾ ತೆರೆಕಂಡ ಹಿನ್ನೆಲೆ ಇಡೀ ಚಿತ್ರರಂಗ ಸಂಭ್ರಮಿಸಿದೆ. ಹಲವು ನಿರ್ದೇಶಕರು, ನಟರು ಚಿತ್ರತಂಡಕ್ಕೆ ಶುಭಾಶಯ ಕೋರಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬನ್ನಿ ಎಂದು ಮನವಿ ಮಾಡಿದ್ದಾರೆ.ಒಂದು ದಿನಕ್ಕೂ ಮುಂಚೆ ಬೆಂಗಳೂರಿನ ವಿರೇಶ್ ಚಿತ್ರಮಂದಿರದಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಖ್ಯಾತ ನಟ-ನಟಿಯರು ಹಾಗೂ ನಿರ್ದೇಶಕರು, ತಂತ್ರಜ್ಞರು ಮೊದಲ ಶೋ ನೋಡಿ ಸ್ವಾಗತ ಕೋರಿದರು. ಇನ್ನೂ ಕೋವಿಡ್ ಮಾರ್ಗಸೂಚಿಯಂತೆ ಚಿತ್ರಮಂದಿರಗಳಲ್ಲಿ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ಸೀಟಿನ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಸೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಮತ್ತು ಸಾಮಾಜಿಕ ಅಂತರದ ಬಗ್ಗೆಯೂ ಕ್ರಮಗಳನ್ನ ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ಮಾಡಲಾಗಿದೆ.
ಚಿತ್ರದಲ್ಲಿ ಯಜ್ಞಾ ಶೆಟ್ಟಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿ. ಸುರೇಶ್, ಪೊಲೀಸ್ ಅಧಿಕಾರಿ ಪ್ರಮೋದ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
Act 1978
ನಿಶ್ಚಿತಾರ್ಥಕ್ಕೆ ಹೊರಟವರು ಮಸಣ ಸೇರಿದರು: ಭೀಕರ ಅಪಘಾತದಲ್ಲಿ ನಾಲ್ವರು ಬಲಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel