Head bush – ಹೆಡ್ ಬುಷ್ ಬಗ್ಗೆ ನಟ ಚೇತನ್ ಹೇಳಿದ್ದೇನು ?
ಹೆಡ್ ಬುಷ್ ಸಿನಿಮಾದ ವಿವಾದ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಹಿಂದೂಪರ ಸಂಘಟನೆಗಳು ಡಾಲಿ ಧನಂಜಯ ವಿರುದ್ಧ ತಿರುಗಿ ಬಿದ್ದಿದ್ದು, ಚಿತ್ರ ಪ್ರದರ್ಶನ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇತ್ತ ಡಾಲಿ ಪರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಕ್ಯಾಂಪೇನ್ ಶುರುವಾಗಿದೆ.
ಇದೀಗ ವಿವಾದ ಬಗ್ಗೆ ನಟ ಚೇತನ್ ಪ್ರತಿಕ್ರಿಯೆ ನೀಡಿದ್ದು, ನಾನು ಸಿನಮಾವನ್ನು ವೀಕ್ಷಿಸಿದೆ.

ಕೆಲವು ವಿಭಾಗಗಳಿಗೆ ಆಕ್ಷೇಪಾರ್ಹ ಎಂದು ಕರೆಯಬಹುದಾದ ಚಲನಚಿತ್ರದ ದೃಶ್ಯಗಳು ಕತ್ತರಿಸುವಂತೆ ಒತ್ತಾಯಿಸಲಾಗಿದೆ.
ಪ್ರಸ್ತುತ ಬೇಡಿಕೆಗಳು ಸೃಜನಶೀಲ ಸ್ವಾತಂತ್ರ್ಯಗಳಿಗೆ ವಿರುದ್ಧವಾಗಿದೆ.
ಸೆನ್ಸಾರ್ ಮಂಡಳಿಯ ಅನುಮತಿ ಪಡೆದ ನಂತರ ಚಿತ್ರ ಮತ್ತು ಚಿತ್ರಣಕ್ಕೆ ಸ್ವಾತಂತ್ರ್ಯ ನೀಡಬೇಕು.
ಭಿನ್ನಾಭಿಪ್ರಾಯವು ಪ್ರಜಾಸತ್ತಾತ್ಮಕವಾಗಿದೆ, ಹೊರತು ಬೆದರಿಕೆಗಳಲ್ಲ ಎಂದು ಬರೆದುಕೊಂಡಿದ್ದಾರೆ.








