ನಟ ದರ್ಶನ್ ಬಹಳ ಮುಗ್ಧ : ಬಿ.ಸಿ.ಪಾಟೀಲ್
ಬೆಂಗಳೂರು : ನಟ ದರ್ಶನ್ ಬಹಳ ಮುಗ್ಧ. ಯಾವುದೇ ಕೆಟ್ಟ ಕೆಲಸ ಮಾಡಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ಕೃಷಿ ಸಚಿವ ಬಿಸಿ ಪಾಟೀಲ್ ಬ್ಯಾಟ್ ಬೀಸಿದ್ದಾರೆ.
ದರ್ಶನ್ ವಿರುದ್ಧ ಹಲ್ಲೆ ಆರೋಪ ವಿಚಾರವಾಗಿ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿದ ಬಿ.ಸಿ.ಪಾಟೀಲ್, ಅಂತಹ ಯಾವುದೇ ಕೆಲಸ ದರ್ಶನ್ ಮಾಡಿಲ್ಲ ಅಂತ ನನಗೆ ಮನವರಿಕೆ ಇದೆ.
ದರ್ಶನ್ ಬಹಳ ಮುಗ್ಧ. ಕೆಳ ಹಂತದಿಂದ ಮೇಲೆ ಬೆಳೆದು ಬಂದವರು. ಅವರ ಏಳಿಗೆ ಸಹಿಸಲಾರದವರು ದುರುದ್ದೇಶದಿಂದ ಅವರ ಮೇಲೆ ಇಂತಹ ಕೇಸ್ ಹಾಕಿಸಿ ಆರೋಪ ಮಾಡ್ತಿದ್ದಾರೆ ಅನ್ನೋದು ನನ್ನ ಭಾವನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದರ್ಶನ್ ಬಹಳ ಸರಳ, ದೊಡ್ಡ ಹೃದಯದ ಹುಡುಗ ಎಂದ ಪಾಟೀಲ್, ತಲೆ ತೆಗೆಯುತ್ತೇನೆ ಎಂಬ ದರ್ಶನ್ ಪದ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕೂಡ ಅವತ್ತು ದರ್ಶನ್ ಹೇಳಿಕೆ ನೋಡಿದ್ದೇನೆ.
ನೀವು ಏನೇನೋ ಕೇಳಬೇಡಿ, ಕೇಳಿದ್ರೆ ರೆಕ್ಕೆ ಪುಕ್ಕ ಬರುತ್ತೆ ಅಂತ ದರ್ಶನ್ ಅವತ್ತು ಹೇಳಿದ್ರು. ಪ್ರಚೋದನೆ ಮಾಡಿ ಪ್ರಶ್ನೆ ಕೇಳಿದ್ದಕ್ಕೆ ಆವೇಶದಲ್ಲಿ ಏನೋ ಹೇಳಿರಬಹುದು. ದರ್ಶನ್ ಹೃದಯದಿಂದ ಅಂತಹ ಮಾತು ಹೇಳೋ ವ್ಯಕ್ತಿ ಅಲ್ಲ ಎಂದರು.










