ಎಸ್.ಎಸ್. ರಾಜಮೌಳಿ ಅವರ ಮುಂದಿನ ಚಿತ್ರ ಯಾವುದು ? ಅವರ ಚಿತ್ರದಲ್ಲಿ ಯಾರು ನಟಿಸುತ್ತಾರೆ ಅನ್ನೋದಕ್ಕೆ ಉತ್ತರ ಸಿಕ್ಕಿದೆ.
ಹೌದು, ಸೂಪರ್ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಚಿತ್ರದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ. ಹಾಗಂತ ಸ್ವತಃ ಈ ವಿಚಾರವನ್ನು ಮಹೇಶ್ ಬಾಬು ಹೇಳಿಕೊಂಡಿದ್ದಾರೆ.
ರಾಜಮೌಲಿ ಮತ್ತು ಮಹೇಶ್ ಚಿತ್ರ ಅಂದ ಮೇಲೆ ಅಬ್ಬರ, ಅದ್ದೂರಿತನದ ಜೊತೆಗೆ ಹೊಸತನವೂ ಇದ್ದೇ ಇರುತ್ತದೆ. ಈ ಚಿತ್ರ ಎಲ್ಲಾ ಭಾಷೆಗಳಲ್ಲಿ ತೆರಕಾಣಲಿದೆ ಎಂದು ಮಹೇಶ್ ಬಾಬು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಮಹೇಶ್ ಬಾಬು, ಈಗ ರೈಟ್ ಟೈಮ್ ಬಂದಿದೆ. ಸರಿಯಾದ ಸಮಯದಲ್ಲಿ ಸರಿಯಾದ ಸಿನಿಮಾ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ. ಅದು ಈಗ ಬಂದಿದೆ. ಎಲ್ಲದಕ್ಕೂ ಕಾಲ ಕೂಡಿ ಬಂದಿದೆ ಎಂದು ಹೇಳಿದ್ದಾರೆ.
ನನ್ನ ಪಾಲಿಗೆ ನನ್ನ ಅಭಿಮಾನಿಗಲೇ ಶಕ್ತಿ. ನನಗೆ ಎಲ್ಲವೂ ತಿಳಿದಿದೆ ಅಂದಾಗ ನಾವು ಬೆಳೆಯಲು ಸಾಧ್ಯವಿಲ್ಲ. ಸಂಯಮ, ತಾಳ್ಮೆ ಮತ್ತು ಬದ್ಧತೆಯನ್ನು ಮೈಗೂಡಿಸಿಕೊಂಡಾಗ ನಮ್ಮ ಬೆಳವಣಿಗೆ ಸಾಧ್ಯ ಅಂತ ಮಹೇಶ್ ಬಾಬು ಹೇಳಿದ್ದಾರೆ.
ಒಟ್ಟಿನಲ್ಲಿ ರಾಜಮೌಳಿ ಅವರು ತೆಲುಗಿನ ಸ್ಟಾರ್ ನಟನಿಗೆ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳಿಗೂ ಭಾರೀ ಕುತೂಹಲ ಮೂಡಿಸಿದೆ.
ಮಗಳ ಫೋಟೋ ತೆಗೆದರೆ ಕಾನೂನು ಕ್ರಮ– ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಗಟ್ಟಿ ನಿರ್ಧಾರ
ಬಾಲಿವುಡ್ನ ಜನಪ್ರಿಯ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ದಂಪತಿಯ ಮಗಳು ರಹಾ ಕಪೂರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗುತ್ತಿದ್ದಂತೆ, ಈ...