ತಂಗಿಗೆ ಅಸಭ್ಯ ವಿಡಿಯೋ ಕಳಿಸಲು ಹೇಳಿದ ನಿರ್ದೇಶಕ – ಕರಾಳ ಮುಖವಾಡ ಕಳಚಿದ ನಟಿಯ ಅಣ್ಣ
ಬಾಲಿವುಡ್ , ಸ್ಯಾಂಡಲ್ ವುಡ್ , ಟಾಲಿವುಡ್ , ಕಾಲಿವುಡ್ , ಮಾಲಿವುಡ್ ಹೀಗೆ ಎಲ್ಲಾ ಸಿನಿಮಾ ರಂಗದಲ್ಲೂ ನೆಪೋಟಿಸಮ್ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿರುವುದಾಗಿ ಆಗಾಗ ಸೆಲೆಬ್ರಿಟಿಗಳು ಆರೋಪಿಸುತ್ತಲೇ ಇರುತ್ತಾರೆ.. ಅದ್ರಲ್ಲೂ ನಟಿಯಯರು ಹೆಚ್ಚಾಗಿ ಕಾಸ್ಟಿಂಗ್ ಕೌಚ್ ನಂತಹ ಸಮಸ್ಯೆಗಳನ್ನ ಎದುರಿಸಿದ್ದಾರೆ. ಈ ಬಗ್ಗೆ ಅನೇಕ ಸ್ಟಾರ್ ಸೆಲೆಬ್ರಿಟಿಗಳು ಸಹ ತಮ್ಮ ಕಹಿ ಅನುಭವಗಳನ್ನ ಹಂಚಿಕೊಂಡಿದ್ದಾರೆ.
ಇದೇ ರೀತಿ ಬಾಲಿವುಡ್ ನಲ್ಲಿ ಕಾಸ್ಟಿಂಗ್ ನಿರ್ದೇಶಕನೊಬ್ಬ ಯುವ ನಟಿಗೆ ಅಸಭ್ಯ ವಿಡಿಯೋ ಮಾಡಿ ಅದನ್ನು ಕಳಿಸುವಂತೆ ಹೇಳಿದ್ದಾನೆ. ಇದೀಗ ಆ ನಿರ್ದೇಶನ ಕರಾಳ ಮುಖವಾಡವನ್ನ ಆ ನಟಿಯ ಅಣ್ಣ (ನಟ) ಸಮಾಜಿಕ ಜಾಲತಾಣದಲ್ಲಿ ಬಟಾಬಯಲು ಮಾಡಿದ್ದಾನೆ. ಅಂದ್ಹಾಗೆ ಈತ ಸಹ ನಟನಾಗಿದ್ದು, ಅನೇಕ ಹಿಂದಿ ಸಿನಿಮಾಗಳು ದಾರಾವಹಿಗಲ್ಲಿ ಕಾಣಿಸಿಕೊಂಡಿದ್ದಾರೆ. ಜೋದಾ ಅಕ್ಬರ್ ದಾರವಾಹಿಯಲ್ಲೂ ನಟಿಸಿರುವ ರವಿ ಭಾಟಿಯಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರವಿ ಭಾಟಿಯಾ ಸೋದರಿ ಸಹ ಸಿನಿಮಾರಂಗ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದು, ಹಲವು ಆಡಿಷನ್ ಗಳಲ್ಲಿ ಭಾಗಿಯಾದ್ದಾರೆ. ಇದೇ ರೀತಿಯಾಗಿ ಆಡಿಷನ್ ಪಡೆದಿದ್ದ ಕಾಸ್ಟಿಂಗ್ ಡೈರೆಕ್ಟರ್, ಆಕೆಗೆ ಅಶ್ಲೀಲ ಚಿತ್ರಗಳನ್ನು ಕಳಿಸುವಂತೆ ಕೇಳಿದ್ದಾನೆ.. ಅಷ್ಟೇ ನಟಿ ಚಿತ್ರಗಳನ್ನು ಕಳಿಸಿದ್ದಾಳೆ. ನಂತರ ಮತ್ತೆ ಸಂದೇಶ ಕಳಿಸಿ, ‘ಹಸ್ತ ಮೈಥುನ ಮಾಡಿಕೊಳ್ಳುತ್ತಿರುವ ವಿಡಿಯೋ ಕಳಿಸು’ ಎಂದು ಕೇಳಿದ್ದಾನೆ.
ಇದು ಆಕೆಯ ಅಣ್ಣ ರವಿಗೆ ಗೊತ್ತಾಗಿದೆ.. ಬಳಿಕ ರವಿ ಭಾಟಿಯಾ ಆ ಕಾಸ್ಟಿಂಗ್ ಡೈರೆಕ್ಟರ್ ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಬಹಿರಂಗ ಪಡಿಸಿದ್ದು, ಆ ಡೈರೆಕ್ಟರ್ ನನ್ನೂ ಸಹ ಟ್ಯಾಗ್ ಮಾಡಿದ್ದಾರೆ. ಫೇಸ್ಬುಕ್ ಪೋಸ್ಟ್ನಲ್ಲಿ ಆತ ಕಳಿಸಿದ್ದ ಸಂದೇಶದ ಸ್ಕ್ರೀನ್ ಶಾಟ್ ಅನ್ನ ಸಹ ಹಚಿಕೊಂಡಿದ್ದಾರೆ.
ತನ್ನ ಮಾನ ಮರ್ಯಾದೆ ಸಾರ್ವಜನಿಕವಾಗಿ ಹರಾಜಾಗುತ್ತಿದ್ದಂತೆ ಕಾಸ್ಟಿಂಗ್ ಡೈರೆಕ್ಟರ್ ರವಿ ಭಾಟಿಯಾಗೆ ಕರೆ ಮಾಡಿ ಕಣ್ಣೀರಿಟ್ಟಿದ್ದಾನೆ. ತನ್ನ ತಪ್ಪಿಗೆ ಕ್ಷಮೆ ಕೋರಿದ್ದಾರೆ. ನನ್ನ ನಿರ್ದೇಶಕ ಹೇಳಿದಂತೆ ನಾನು ಮಾಡಿದ್ದೇನೆ. ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಹೇಳಿಕೊಂಡಿದ್ದಾನೆಂದು ಸಹ ರವಿ ಭಾಟಿಯಾ ಹೇಳಿಕೊಂಡಿದ್ದಾರೆ.
ಆದರೆ ರವಿ ಭಾಟಿಯಾ ಕಾಸ್ಟಿಂಗ್ ಕೌಚ್ ನಿರ್ದೇಶಕನ ಹೆಸರು, ಫೊಟೊಗಳನ್ನು ಎಲ್ಲ ಪ್ರೊಡಕ್ಷನ್ ಸಂಸ್ಥೆಗಳೊಂದಿಗೆ ಹಂಚಿಕೊಂಡಿದ್ದಾರೆ. ಆತನಿಗೆ ಯಾವುದೇ ಕೆಲಸ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.