ಮತ್ತೆ ಬರಲಿದೆ ಬಜರಂಗಿ ಭಾಯಿಜಾನ್ 2. ಖಚಿತಪಡಿಸಿದ ಸಲ್ಮಾನ್
ನಟ ಸಲ್ಮಾನ್ ಖಾನ್ ಅವರು ತಮ್ಮ ಹಿಟ್ ಚಿತ್ರ ಬಜರಂಗಿ ಭಾಯಿಜಾನ್‌ನ ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳುವುದಾಗಿ ಖಚಿತಪಡಿಸಿದ್ದಾರೆ. ಭಾನುವಾರ ನಡೆದ ಎಸ್‌ಎಸ್ ರಾಜಮೌಳಿ ಅವರ ಮುಂಬರುವ ಚಲನಚಿತ್ರ ಆರ್‌ಆರ್‌ಆರ್‌ನ ವಿಶೇಷ ಸಮಾರಂಭದಲ್ಲಿ ಸಲ್ಮಾನ್ ಖಾನ್ ಮುಂದಿನ ಚಿತ್ರ ಬಜರಂಗಿ ಭಾಯಿಜಾನ್ 2 ಬಗ್ಗೆ ,ಮಾತನಾಡಿದ್ದಾರೆ.
2015ರಲ್ಲಿ ತೆರೆಗೆ ಬಂದಿದ್ದ ಚಿತ್ರ, ಹೆತ್ತವರಿಂದ ಬೇರ್ಪಟ್ಟ ಆರು ವರ್ಷದ ಮಾತು ಬಾರದ ಪಾಕಿಸ್ತಾನಿ ಹುಡುಗಿಯನ್ನು (ಹರ್ಶಾಲಿ ಮಲ್ಹೋತ್ರಾ) ಭಾರತ ದೇಶದ ವ್ಯಕ್ತಿ ಬಾಲಕಿಯನ್ನ ಮತ್ತೆ ಪೋಷಕರ ಮನೆಗೆ ಕರೆದೊಯ್ಯುವ ವ್ಯಕ್ತಿಯಾಗಿ ಸಲ್ಮಾನ್ ಕಾಣಿಸಿಕೊಂಡಿದ್ದರು.
ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದಾರೆ ಮತ್ತು ಪ್ರಸಿದ್ಧ ಚಿತ್ರಕಥೆಗಾರ ಕೆವಿ ವಿಜಯೇಂದ್ರ ಪ್ರಸಾದ್ ಬರೆದಿದ್ದಾರೆ.
ರಾಜಮೌಳಿ ಅವರ ಚಿತ್ರ RRR ವಿಶೇಷ ಸಮಾರಂಭದಲ್ಲಿ ಸಲ್ಮಾನ್ ಈ ಘೋಷಣೆ ಮಾಡಿದರು. ಶೀಘ್ರದಲ್ಲೇ ನಾವು ಬಜರಂಗಿ ಭಾಯಿಜಾನ್ 2 ಗಾಗಿ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತೇವೆ” ಎಂದು ಸಲ್ಮಾನ್ ಹೇಳಿದರು.
ಸಲ್ಮಾನ್ ಸುದ್ದಿಯನ್ನು ಖಚಿತಪಡಿಸಿದ ತಕ್ಷಣ, ಅವರ ಅಭಿಮಾನಿಗಳು ಮುಂಬರುವ ಚಿತ್ರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಲು ಪ್ರಾರಂಭಿಸಿದರು.








