ಮಗಳು ಸಾರಾ ಚಿತ್ರ ನೊಡಿ ಕಣ್ಣೀರು ಹಾಕಿದ ಸೈಪ್, ಅಮೃತಾ…..
ನಟಿ ಸಾರಾ ಅಲಿ ಖಾನ್ ಅವರು ತಮ್ಮ ಇತ್ತೀಚಿನ ಚಿತ್ರ ಅತ್ರಾಂಗಿ ರೇ ಚಿತ್ರದಲ್ಲಿನ ಅಭಿನಯದಿಂದ ತಮ್ಮ ತಂದೆ-ನಟ ಸೈಫ್ ಅಲಿ ಖಾನ್ ಮತ್ತು ತಾಯಿ ಅಮೃತಾ ಸಿಂಗ್ ಅವರನ್ನು ಅಳುವಂತೆ ಮಾಡಿದ್ದಾರೆ ಈ ಸುದ್ದಿಯನ್ನ ಸ್ವತಃ ಅವರೆ ಬಹಿರಂಗ ಪಡಿಸಿದ್ದಾರೆ.
ಖ್ಯಾತ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಅವರ ನೂತನ ಚಿತ್ರ ‘ಅತರಂಗಿ ರೇ’ ಇತ್ತೀಚೆಗೆ ತೆರೆ ಕಂಡಿದೆ.ಸಾರ ಆಲಿ ಖಾನ್ ಅವರಿಗೆ ಈ ಚಿತ್ರ ಬ್ರೇಕ್ ನೀಡಲಿದೆ ಎನ್ನುವ ವಿಶ್ವಾಸ ಹೊಂದಿದ್ದಾರೆ.
ಚಿತ್ರನಿರ್ಮಾಪಕ ಆನಂದ್ ಎಲ್ ರೈ ಅವರ ಅತ್ರಾಂಗಿ ರೇ ಚಿತ್ರದಲ್ಲಿ ಸಾರಾ ಅಲಿ ಖಾನ್, ಅಕ್ಷಯ್ ಕುಮಾರ್ ಮತ್ತು ಧನುಷ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಮೂರು ಪಾತ್ರಗಳ ನಡುವಿನ ತ್ರಿಕೋನ ಪ್ರೇಮವನ್ನು ಹೊಂದಿದೆ — ರಿಂಕು (ಸಾರಾ), ವಿಷು (ಧನುಷ್) ಮತ್ತು ಸಜ್ಜದ್ (ಅಕ್ಷಯ್). ಚಿತ್ರವು ಡಿಸೆಂಬರ್ 24 ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಯಿತು.
ಖಾಸಗಿ ಟೀ ವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಸಾರ ಈ ಚಿತ್ರ ನೋಡಿದ ನಂತರ ನನ್ನ ತಾಯಿ ಅಮೃತ ಮತ್ತು ತಂದೆ ಸೈಫ್ ಕಣ್ಣೀರು ಹಾಕಿದ್ದಾರೆ.. ಇದಕ್ಕಿಂತ ವಿಮರ್ಶೆ ಬೇಕಿಲ್ಲ ನಿಮ್ಮ ಹೆತ್ತವರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ ಎಂಬುದು ವಿಶೇಷ ಅನುಭವ ಎಂದಿದ್ದಾರೆ.
ಇದನ್ನು ಹೇಗೆ ಬರೆಯುವುದೆಂದು ತಿಳಿಯುತ್ತಿಲ್ಲ. ಆದರೆ 2020ರಲ್ಲಿ ನನಗೆ ಸಂಭವಿಸಿದ ಏಕೈಕ ಒಳ್ಳೆಯ ವಿಚಾರ ಇದು. ಇಡೀ ಜೀವಮಾನಕ್ಕಾಗುವಷ್ಟು ಸುಮಧುರ ನೆನಪು ನೀಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳು’’ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಾರಾ ಅಭಿನಯಕ್ಕೆ ಸಹನಟ ಧನುಷ್, ಅಕ್ಷಯ್ ಕುಮಾರ್ ಸೇರಿದಂತೆ ಚಿತ್ರರಂಗದ ಹಲವರು ಶಹಬ್ಬಾಸ್ ಎಂದಿದ್ದಾರೆ.