ಕಬ್ಜ ಚಿತ್ರಕ್ಕಾಗಿ ಕನ್ನಡಕ್ಕೆ ಕಂಬ್ಯಾಕ್ ಮಾಡಿದ ಶ್ರೀಯಾ….
ಕಬ್ಜ ಸಿನಿಮಾ ಸೆಟ್ಟೇರಿದ ದಿನದಿಂದ ಕುತೂಹಲವನ್ನ ಕೆರಳಿಸುತ್ತಲೇ ಇದೆ… ಮೊದಲಿಗೆ ಉಪೇಂದ್ರ ನಂತರ ಸುದೀಪ್ ವಿಚಾರವಾಗಿ ಸಾಕಷ್ಟು ಸುದ್ದಿ ಮಾಡಿತ್ತು ಈಗ ಹೀರೋಹಿನ್ ವಿಷಯದಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ಕಬ್ಜ ಚಿತ್ರಂಡ ಪ್ಯಾನ್ ಇಂಡಿಯಾ ಸಿನಿಮಾದ ಮೊದಲ ಹೀರೋಹಿನ್ ಅನ್ನ ಪರಿಚಯಿಸಲಿದ್ದೇವೆ ಎಂದು ಹೇಳಿಕೊಂಡಿತ್ತು. ಅದರಂತೆ ಬಹು ಬಾಷ ನಟಿ ಶ್ರೀಯಾ ಸರಣ್ ಅವರನ್ನ ಚಿತ್ರ ಮೊದಲ ನಾಯಕಿಯಾಗಿ ಘೋಷಣೆ ಮಾಡಲಾಗಿದೆ.
ಉಪೇಂದ್ರ ಅವರಿಗೆ ಜೊಡಿಯಾಗಿ ಶ್ರೀಯಾ ಶರಣ್ ನಟಿಸುತ್ತಿರುವ ಬಗ್ಗೆ ಆರ್ ಚಂದ್ರು ರಿವಿಲ್ ಮಾಡಿದ್ದಾರೆ. ಸಿನಿಮಾದಲ್ಲಿ ಮತ್ತೊಂದು ಪ್ರಮುಖ ಪಾತ್ರ ಮಾಡುತ್ತಿರುವ ಸುದೀಪ್ ಅವರಿಗೆ ಹೀರೋಹಿನ್ ಆಗಿ ಯಾರು ಬರುತ್ತಾರೆ ಎಂಬುದು ಇನ್ನೂ ರಿವೀಲ್ ಆಗಿಲ್ಲ.
ಕಬ್ಜ ಸಿನಿಮಾಗಾಗಿ ಶ್ರೀಯಾ ಸರಣ್ 20 ದಿನಗಳ ಕಾಲ್ ಶೀಟ್ ಕೊಟ್ಟಿದ್ದಾರೆ. ಅಷ್ಟು ದಿನಗಳ ಒಳಗೆ ಅವರ ಚಿತ್ರದ ಪೋಷನ್ ಮುಗಿಸಬೇಕಿದೆ. ರಾಜಮೌಳಿ ನಿರ್ದೇಶನದ RRR ಚಿತ್ರದಲ್ಲಿ ಶ್ರೀಯಾ ಅಭಿನಯಿಸಿದ ನಂತರ ಮತ್ತೊಮ್ಮೆ ತಮ್ಮ ಬೇಡಿಕೆಯನ್ನ ಹೆಚ್ಚಿಸಿಕೊಂಡಿದ್ದಾರೆ. ಅಜಯ್ ದೇವಗನ್ ನಟನೆಯ 300 ಕೋಟಿ ಬಜೆಟ್ ನ ಮತ್ತೊಂದು ಸಿನಿಮಾದಲ್ಲೂ ಶ್ರೀಯಾ ನಾಯಕಿಯಾಗಿ ನಟಿಸಲಿದ್ದಾರೆ…