ನಟ ಸಿಂಬು ಇನ್ಮುಂದೇ ಡಾ. ಸಿಂಬು – ಗೌರವ ಡಾಕ್ಟರೇಟ್ ಪ್ರಧಾನ
ಮಾನಾಡು ಚಿತ್ರದ ಯಶಸ್ಸಿನಿಂದ ನಟ ಸಿಂಬು ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಹಲವು ವರ್ಷಗಳಿಂದ ಬಿಗ್ ಬ್ರೇಕ್ ಗೆ ಕಾದಿದ್ದ ಸಿಂಬುಗೆ ಮಾನಾಡು ನಿರೀಕ್ಷಿತ ಯಶಸ್ಸು ನೀಡಿತ್ತು. ಈಗ ಸಿಲಂಬರಸನ್ ಸಿಂಬು ಮತ್ತೊಮ್ಮೆ ಖುಷಿಯಾಗಿದ್ದಾರೆ. ಸಿಂಬು ಮುಡಿಗೆ ಮತ್ತೊಂದು ಗರಿ ಸಿಕ್ಕಿದ್ದು ವೇಲ್ಸ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಅಭಿನಂದಿಸಿದೆ.
ಇನ್ಮುಂದೆ ನಟ ಸಿಂಬು ಡಾ.ಸಿಂಬು ಆಗಿ ಗುರುತಿಸಿಕೊಳ್ಳಲಿದ್ದಾರೆ. ಗೌರವ ಡಾಕ್ಟರೇಟ್ ಪಡೆಯುವ ಚಿತ್ರಗಳು ವೈರಲ್ ಆಗಿವೆ. ಅಭಿಮಾನಿಗಳು ಸೆಲೆಬ್ರಟಿಗಳು ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ.
ವೇಲ್ಸ್ ವಿಶ್ವವಿದ್ಯಾಲಯವು ತ್ತೀಚೆಗೆ ಚೆನೈನಲ್ಲಿ ನಡೆದ ಸಮಾರಂಭದಲ್ಲಿ ಸಿಂಬುಗೆ ಡಾಕ್ಟರೇಟ್ ಪದವಿ ನೀಡಿದೆ. “ ಈ ದೊಡ್ಡ ಗೌರವವನ್ನ ನಾನು ತಮಿಳು ಚಿತ್ರರಂಗಕ್ಕೆ ಹಾಗು ನನ್ನ ತಂದೆ ತಾಯಿಗೆ ಅರ್ಪಿಸುತ್ತೆನೆ. ಅವರಿಂದಲೇ ನಾನು ಸಿನಿಮಾ ರಂಗದಲ್ಲಿ ಬೆಳೆಯಲು ಸಾಧ್ಯವಾಯಿತು, ಅಂತಿಮವಾಗಿ ನನ್ನ ಅಭಿಮಾನಿಗಳಿಗೆ ಅವರಿಲ್ಲದೆ ನಾನಿಲ್ಲ ಎಂದು “ ಸಿಂಬು ಟ್ವೀಟ್ ಮಾಡಿದ್ದಾರೆ.
Thanking all the committee members of Vels University & @IshariKGanesh for bestowing the Honorary Doctorate upon me.
I dedicate this huge honour to
Tamil cinema, my Appa & Amma! Cinema happened to me because of them!
Finally – my fans, #NeengailaamaNaanilla
Nandri Iraiva! ❤️ pic.twitter.com/YIc6WyGCvR— Silambarasan TR (@SilambarasanTR_) January 11, 2022
ಬಾಲ ನಟನಾಗಿ ಬೆಳ್ಳಿ ಪರದೆಗೆ ಕಾಲಿಟ್ಟ ಸಿಂಬು 1980 ರಿಂದ ಬಣ್ಣದ ಲೋಕದ ನಂಟು ಹೊಂದಿದ್ದಾರೆ. ನಿರ್ದೇಶಕನಾಗಿ ಬರಹಗಾರನಾಗಿ ತಮ್ಮ ಸಾಮರ್ಥ್ಯವನ್ನ ತಮಿಳು ಸಿನಿ ದುನಿಯಾಗೆ ಪರಿಚಯ ಮಾಡಿಕೊಟ್ಟಿದ್ದಾರೆ. 20 ವಯಸ್ಸಿನಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟ ನಟ 21 ವಯಸ್ಸಿಗೆ ಮನ್ಮಥಂ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದರು. ಆ ಚಿತ್ರ ಸೂಪರ್ ಹಿಟ್ ಆಗುವ ಮೂಲಕ ವೃತ್ತಿ ಜೀವನಕ್ಕೆ ದೊಡ್ಡ ಯಶಸ್ಸು ನೀಡಿತ್ತು. ಸಿನಿಮಾ ಕ್ಷೇತ್ರದಲ್ಲಿ ಹಲವು ಏಳು ಬೀಳುಗಳನ್ನ ಕಂಡರೂ, ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.