ಚಂದನವನದ ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ಸೋನಲ್ (Sonal) ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.
ಸೆ. 1ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ದಂಪತಿ ಮದುವೆಯಾಗಲು ನಿರ್ಧರಿಸಿದ್ದಾರೆ. ಸೋನಲ್ ಕ್ರೈಸ್ತ ಧರ್ಮದವರಾಗಿದ್ದು, ಸದ್ಯ ಅವರ ಸಂಪ್ರದಾಯದಂತೆ ಸೆ.1ರಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಮದುವೆ ಆರತಕ್ಷತೆ ಕೂಡ ನಡೆಯಲಿದೆ. ಹೀಗಾಗಿ ಅವರ ಧರ್ಮದ ಪ್ರಕಾರ ಕೂಡ ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ, ಈ ಮದುವೆಗೆ ಕುಟುಂಬಸ್ಥರು, ಆಪ್ತರಿಗೆ ಮಾತ್ರ ಆಹ್ವಾನ ಸಿಗಲಿದೆ.
ಇದೇ ಆ.11ರಂದು ತರುಣ್ ಮತ್ತು ಸೋನಲ್ ಹಿಂದೂ ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆಗೆ ಸಾಕಷ್ಟು ಜನರು ಆಗಮಿಸಿದ್ದರು.