ಕಪಲ್ ಚಾಲೆಂಜ್ ಗೆ ನಟಿ ಅಲೆಕ್ಸಾಂಡ್ರಾ ಜೊತೆಗಿನ ಪೋಟೋ ಹಂಚಿಕೊಂಡ ಯುವಕ – ಪ್ರತಿಕ್ರಿಯಿಸಿದ ನಟಿ
ಬರೇಲಿ, ಸೆಪ್ಟೆಂಬರ್27: ಇತ್ತೀಚಿನ ದಿನಗಳಲ್ಲಿ ಕಪಲ್ ಚಾಲೆಂಜ್ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕಪಲ್ಸ್ ಫೋಟೋ ಹಂಚಿಕೊಳ್ಳುವುದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
ಉತ್ತರ ಪ್ರದೇಶದ ಬರೇಲಿ ನಿವಾಸಿಯೊಬ್ಬರು ನಟಿ ಅಲೆಕ್ಸಾಂಡ್ರಾ ದಡ್ಡಾರಿಯೊ ಅವರೊಂದಿಗೆ ಇರುವಂತೆ ಪೋಟೋ ಎಡಿಟ್ ಮಾಡಿ ಅದನ್ನು #coupleschallenge ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಪೋಸ್ಟ್ ಮಾಡಿದ್ದಾರೆ.
ಕಡಿಮೆ ದರದಲ್ಲಿ “ಮೇಡ್ ಇನ್ ಇಂಡಿಯಾ” ಕೊರೊನಾ ಕಿಟ್ ಲಭ್ಯ..!
ಭತ್ತದ ಗದ್ದೆಯ ಮಧ್ಯದಲ್ಲಿ ಬೇವಾಚ್ ಮತ್ತು ಪರ್ಸಿ ಜಾಕ್ಸನ್ ಸಿರೀಸ್‌ನಂತಹ ಸಿನಿಮಾಗಳಲ್ಲಿ ನಟಿಸಿರುವ ದಡ್ಡರಿಯೊ ಅವರೊಂದಿಗೆ ಇರುವಂತೆ ಆ ಫೋಟೋವನ್ನು ತೋರಿಸಲಾಗಿದೆ.
https://twitter.com/BarnabasAkash/status/1309042130346749959?s=19
ಇದನ್ನು ಫೋಟೋಶಾಪ್ ಎಂದು ದ್ವೇಷಿಸುವವರು ಹೇಳುತ್ತಾರೆ ಎಂದು ಅಡಿ ಬರಹವನ್ನು ನೀಡಿ ಬರೇಲಿ ನಿವಾಸಿ ಟ್ವೀಟ್ ಮಾಡಿದ್ದು, ನಟಿಯನ್ನು ಟ್ಯಾಗ್ ಮಾಡಿದ್ದಾರೆ. ಟ್ವೀಟ್ ಅನ್ನು ನೋಡಿರುವ ದಡ್ಡರಿಯೊ, ಇದು ನಿಜಕ್ಕೂ ಫನ್ ವೀಕೆಂಡ್ ಎಂದು ನಗುತ್ತಾ ರೀಟ್ವೀಟ್ ಮಾಡಿದ್ದಾರೆ.
ನಟಿ ಅಲೆಕ್ಸಾಂಡ್ರಾ ದಡ್ಡಾರಿಯೊ ಅವರು ಪ್ರತಿಕ್ರಿಯಿಸಿದ್ದು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ವಿವಿಧ ರೀತಿಯ ಕಮೆಂಟ್ ಮಾಡಿ ಬರೇಲಿ ನಿವಾಸಿಯ ಕಾಲೆಳೆದಿದ್ದಾರೆ.
https://twitter.com/AADaddario/status/1309154866850394113?s=19








