ಐಟಂ ಹಾಡಿಗೆ ಸೊಂಟ ಬಳುಕಿಸಿ ಕೋಟಿ ಕೇಳುವ ನಟಿಯರಿವರು….
ಚಿತ್ರಗಳಲ್ಲಿ ಜನರನ್ನ ಸೆಳೆಯುವುದಕ್ಕಂತಲೇ ಐಟಂ ಸಾಂಗ್ ಗಳನ್ನ ಸಿನಿಮಾದಲ್ಲಿ ತರಲಾಗುತ್ತೆ. ಐಟಂ ಹಾಡಿಗೆ ಕುಣಿಯಲು ಸ್ಟಾರ್ ಹಿರೋಹಿನ್ ಗಳನ್ನೆ ಕರೆದುಕೊಂಡು ಬರುವ ಪರಿಪಾಠ ಆರಂಭವಾದ ಮೇಲೆ ಐಟಂ ಹಾಡಿಗೆ ಕುಣಿಯುವ ಹೀರೋಹಿನ್ ಗಳ ಡಿಮ್ಯಾಂಡ್ ಸಹ ಗಗನ ಮುಟ್ಟಿದೆ. ಒಂದು ಐಟಂ ನಂಬರ್ ಗೆ ನಟಿಯರು ಕೋಟ್ಯಂತರ ರೂಪಾಯಿ ಚಾರ್ಜ್ ಮಾಡುತ್ತಾರೆ. ಸಮಂತಾ ರುತ್ ಪ್ರಭುರವರಿಂದ ಜಾಕ್ವೆಲಿನ್ ಫರ್ನಾಂಡೀಸ್ ವರೆಗೆ ಅತಿ ಹೆಚ್ಚು ಸಂಭಾವನೆ ಕೇಳುವ ನಟಿಯರ ಬಗ್ಗೆ ನಾವು ತಿಳಿಸಿಕೊಡ್ತೀವಿ.
ಈ ಪಟ್ಟಿಯಲ್ಲಿ ದಕ್ಷಿಣದ ಸೂಪರ್ ಸ್ಟಾರ್ ಸಮಂತಾ ರುತ್ ಪ್ರಭು ಅವರ ಹೆಸರು ಮೊದಲ ಸ್ಥಾನದಲ್ಲಿದೆ. ಮೊನ್ನೆ ಮೊನ್ನೆ ತಾನೆ ಪುಷ್ಪ ಸಿನಿಮಾದಲ್ಲಿ ಹೂ ಅಂಟಾವಾ ಹಾಡಿಗೆ ಸೊಂಟ ಬಳುಕಿಸಿದ್ದ ಸಮಂತಾ ಒಂದು ಐಟಂ ಸಂಖ್ಯೆಗೆ 5 ಕೋಟಿ ಚಾರ್ಜ್ ಮಾಡುತ್ತಾರೆ.
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಹಲವು ಐಟಂ ಸಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣದಲ್ಲಿ ಗಡಗ್ ರಕ್ಕಮ್ಮನಾಗಿ ಹೆಜ್ಜೆ ಹಾಕಿದ್ದಾರೆ. ಜಾಕ್ವೆಲಿನ್ ಒಂದು ಹಾಡಿಗೆ 3 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರೆ.
ಸನ್ನಿ ಲಿಯೋನ್ ತನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಐಟಂ ನಂಬರ್‌ಗೆ 25 ಲಕ್ಷ ರೂ. ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಸನ್ನಿ ಲಿಯೋನ್ ಒಂದು ಐಟಂ ಹಾಡಿಗೆ ಸುಮಾರು 3 ಕೋಟಿ ರೂ ಡಿಮ್ಯಾಂಡ್ ಮಾಡ್ತಾರೆ.
ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಕೆಲವೇ ಕೆಲವು ಐಟಂ ನಂಬರ್‌ಗಳನ್ನು ಮಾಡಿದ್ದಾರೆ. ಆದರೆ, ಇಲ್ಲಿಯವರೆಗೆ ಅವರು ಕೆಲಸ ಮಾಡಿದ ಹಾಡುಗಳು ಸೂಪರ್‌ಹಿಟ್ ಆಗಿವೆ. ವರದಿಗಳ ಪ್ರಕಾರ ಚಿತ್ರಾಂಗದಾ ಒಂದು ಹಾಡಿಗೆ ಸುಮಾರು 60 ಲಕ್ಷ ರೂ. ತೆಗೆದುಕೊಳ್ತಾರೆ.
ಬಾಲಿವುಡ್ ಸೂಪರ್ ಸ್ಟಾರ್ ಕತ್ರಿನಾ ಕೈಫ್ ಕೂಡ ಕೆಲವು ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕಿದ್ದಾರೆ. ‘ಚಿಕ್ನಿ ಚಮೇಲಿ’, ‘ಶೀಲಾ’ ಹಾಡುಗಳಿಗೆ 50 ಲಕ್ಷ ರೂ. ತೆಗೆದುಕೊಂಡಿರುವ ಕ್ಯಾಟ್ ‘ಧೂಮ್ 3’ ನಂತರ ಅವರು ತಮ್ಮ ಶುಲ್ಕವನ್ನು ಹೆಚ್ಚಿಸಿಕೊಂಡಿದ್ದಾರೆ.
‘ದಿಲ್ಬರ್’ ನಿಂದ ‘ಸಾಕಿ-ಸಾಕಿ’ ವರೆಗೆ, ನೋರಾ ಫತೇಹಿ ಅನೇಕ ಐಟಂ ಸಾಂಗ್ ಗಳಿಗೆ ಸೊಂಟ ಬಳುಕಿಸಿದ್ದಾರೆ. ವರದಿಗಳ ಪ್ರಕಾರ, ಅವರು ಒಂದು ಹಾಡಿಗೆ 50 ಲಕ್ಷ ರೂ. ಆದಾಯ ಪಡೆಯುತ್ತಾರೆ.