ಈಗ ಮತ್ತು ಮೋಹಿನಿ ಖ್ಯಾತಿಯ ನಟಿ ಹಂಸ ನಂದಿನಿ ಗೆ ಸ್ತನ ಕ್ಯಾನ್ಸರ್…
ಕನ್ನಡದ ‘ಮೋಹಿನಿ 9886788888’ ಎಂಬ ಚಿತ್ರ ಮತ್ತು ಸುದೀಪ್ ಅಭಿನಯದ ‘ಈಗ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ನಟಿ ಹಂಸ ನಂದಿನಿ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
ಕಳೆದ ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ನಟಿ ಹಂಸಾ ನಂದಿನಿ ಈ ವಿಷಯವನ್ನು ಸ್ವತಃ ಇನ್ಸ್ಟಾ ಗ್ರಾಂ ವೇದಿಕೆಯಲ್ಲಿ ಬಹಿರಂಗಪಡಿಸಿದ್ದಾರೆ. ಹಂಸ ತನ್ನ ಜೀವನದಲ್ಲಿ ಕಾಲ ಯಾವುದೇ ಪ್ರಭಾವವನ್ನು ತೋರಿಸಿದರು ತಾನು ಭಾಧಿಸುವುದಕ್ಕೆ ಬಯಸುವುದಿಲ್ಲ ಎಂದು ಹೇಳಿದರು.
ಹಂಸ ನಂದಿನಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದರು. ಅವರು ಯಾವುದೇ ಪೋಸ್ಟ್ಗಳನ್ನು ಹಾಕಿರಲಿಲ್ಲ. ಇದನ್ನು ಕಂಡು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು.ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಬಣ್ಣ ಹಚ್ಚಿದ ಹಂಸ ನಂದಿನಿ ಅವರಿಗೆ ಕ್ಯಾನ್ಸರ್ ಪತ್ತೆ ಆಗಿದೆ.
ಕೂದಲು ಇಲ್ಲದ ತಲೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ತಿಳಿಸಿದ್ದಾರೆ. ನನಗೆ ನಾಲ್ಕು ತಿಂಗಳ ಹಿಂದೆ ಸ್ತನ ಕ್ಯಾನ್ಸರ್ ಪತ್ತೆ ಆಯಿತು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ನಾನು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಪಡಬೇಕಾಗುತ್ತದೆ.
. ಈ ಕ್ಯಾನ್ಸರ್ ಎಂಬ ಮಾರಿ ನಾನು ಬದುಕಿರುವವರೆಗೂ ಇರುತ್ತದೆ. ನಾನು ಈಗಾಗಲೇ 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಈ ಥೆರಪಿಗೆ ಒಳಗಾಗಬೇಕು’ ಎಂದು ಅವರು ಬರೆದುಕೊಂಡಿದ್ದಾರೆ. ಈಗ ಅವರ ಒಂದು ಸ್ತನಕ್ಕೆ ಮಾತ್ರ ಕ್ಯಾನ್ಸರ್ ಇದ್ದು, ಮತ್ತೊಂದು ಸ್ತನಕ್ಕೂ ಈ ಕ್ಯಾನ್ಸರ್ ಹಬ್ಬುವ ಸಾಧ್ಯತೆ ಶೇ. 70 ಇದೆಯಂತೆ.
2004ರಲ್ಲಿ ಹಂಸ ಅವರು ಚಿತ್ರರಂಗಕ್ಕೆ ಕಾಲಿಟ್ಟರು.ಕನ್ನಡ ಮತ್ತು ತೆಲುಗು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 2018 ರಲ್ಲಿ ಬಂದ ‘ಪಂತಂ’ ಸಿನಿಮಾ ಕೊನೆ. ಅದಾದ ನಂತರ ಅವರು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ..