ಬಾಲಿವುಡ್ ನ ಟಾಪ್ ನಟಿ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ದಂಪತಿ ಸದ್ಯ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಬಿ ಟೌನ್ ತುಂಬಾ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಕರೀನಾ ಹಾಗೂ ಸೈಫ್ ಖಚಿತ ಪಡಿಸಿಲ್ಲ.
ಮದುವೆಯಾದ 5 ವರ್ಷಗಳ ಬಳಿಕ ಅಂದರೆ 2016ರಲ್ಲಿ ಮದಲ ಮಗುವಿಗೆ ಕರೀನಾ ಕಪೂರ್ ಜನ್ಮ ನೀಡಿದ್ದರು. ಇದೀಗ ಅವರ ತೈಮೂರ್ ಅಲಿ ಖಾನ್ ಹುಟ್ಟಿ 4 ವರ್ಷಗಳ ಬಳಿಕ ಇದೀಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಈ ಜೋಡಿ ಇದೆ ಎಂದು ಹೇಳಲಾಗುತ್ತಿದೆ.









