ಅವಳಿ ಮಕ್ಕಳಿಗೆ ಜನ್ಮ ನೀಡಿದ ಮತ್ತೋರ್ವ ನಟಿ
ಕೃಷ್ಣಾ ಜನ್ಮಾಷ್ಟಮಿಯಂದು ಅವಳಿ ಮಕ್ಕಳಿಗೆ ಜನ್ಮ
ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ
ಮಕ್ಕಳ ಫೋಟೋ ಅಪ್ ಲೋಡ್ ಮಾಡಿದ ನಮಿತಾ
ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ
ಬಹುಭಾಷಾ ನಟಿ ನಮಿತಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಈ ವಿಷಯವನ್ನು ಸ್ವತಃ ನಮಿತಾ ಅವರೇ ಸೋಶಿಯಲ್ ಮೀಡಿಯಾಗಳ ಮೂಲಕ ತಿಳಿಸಿದ್ದಾರೆ.
ಅವರು ಪತಿಯೊಂದಿಗೆ ಮಕ್ಕಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಅಮಿತಾ ಅವರಿಗೆ ಮದುವೆಯಾಗಿತ್ತು.
ಇತ್ತೀಚೆಗಷ್ಟೆ ಅವರು ಬೇಬಿ ಪಂಪ್ ಫೋಟೋಗಳನ್ನು ಹಂಚಿಕೊಂಡಿದ್ದರು.
ಸಾಕಷ್ಟು ಅಭಿಮಾನಿಗಳು ನೆಚ್ಚಿನ ನಟಿಗೆ ಶುಭ ಹಾರೈಸಿದ್ದರು.
ಗುಜರಾತ್ ಮೂಲದ ನಮಿತಾ ಅವರು, ತೆಲುಗು ಸಿನಿಮಾರಂಗದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು.
ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.