ಒಳ ಉಡುಪಿನ ಸೈಜ್ ಕೇಳಿದವನಿಗೆ ಗ್ರಹಚಾರ ಬಿಡಿಸಿದ ನಟಿ ನೇಹಾ ಚೌಧರಿ
ಬಾಲಿವುಡ್ , ಟಾಲಿವುಡ್ , ಸ್ಯಾಂಡಲ್ ವುಡ್ , ಕಾಲಿವುಡ್ , ಮಾಲಿವುಡ್ ಹೀಗೆ ಎಲ್ಲಾ ಸಿನಿಮಾರಂಗದ ನಟಿಯರು ಆಗಾಗ ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಕಿರುಕುಳಗಳನ್ನ ಅನುಭವಿಸಬೇಕಾಗುತ್ತೆ.. ಅನುಭವಿಸಿದ್ದಾರೆ.. ಸಾಕಷ್ಟು ಟ್ರೋಲ್ ಗಳಿಗೂ ಗುರಿಯಾಗಿದ್ದಾರೆ.. ಮಾನಸಿಕವಾಗಿಯೂ ಚಿತ್ರಹಿಂಸೆ ಅನುಭವಿಸುಔಮತಹ ಪ್ರಸಂಗಗಳು ಜರುಗಿವೆ..
ಅದ್ರಲ್ಲೂ ನಟಿಯರ ದೇಹ , ಅಂಗಾಂಗಗಳ ಬಗ್ಗೆ ಕೆಲ ನೆಟ್ಟಿಗರು ಅಶ್ಲೀಲ ಕಮೆಂಟ್ ಗಳನ್ನ ಮಾಡುತ್ತಲೇ ಇರುತ್ತಾರೆ.. ಇಂತಹ ಕಮೆಂಟ್ ಗಳನ್ನ ಕೆಲವರು ನಿರ್ಲಕ್ಷಿಸಿದ್ರೆ, ಇನ್ನೂ ಕೆಲವರು ಅಂತಹ ನೆಟ್ಟಿಗರಿಗೆ ಸರಿಯಾದ ಪಾಠ ಕಲಿಸಿದ್ದಾರೆ.
ಇದೀಗ ತೆಲುಗಿನ ನಟಿ, ನಿರೂಪಕಿ ಹಾಗೂ ಖುದ್ದು ಅಥ್ಲೇಟ್ ಆಗಿರುವ ನೇಹಾ ಚೌದರಿ ಇಂತಹ ಅಶ್ಲೀಲ ಕಮೆಂಟ್ ಮಾಡಿದ್ದವನ ವಿರುದ್ಧ ದೂರು ದಾಖಲಿಸಿದ್ದಾರೆ.. ಸಾಯಿಕೃಷ್ಣ ಸುಗು ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡಿ ನೇಹಾರ ಒಳ ಉಡುಪಿನ ಸೈಜ್ ಕೇಳಿದ್ದಾನೆ. ಆ ವ್ಯಕ್ತಿಯ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ನೇಹಾ ಆತನ ವಿರುದ್ಧ ಪೊಲೀಸರಿಗೆ ದೂರು ಸಹ ನೀಡಿದ್ದಾರೆ.
ನಾನು ನಿಮ್ಮ ಅಭಿಮಾನಿ ಎಂದು ಮೆಸೆಜ್ ಮಾಡಿದ ವ್ಯಕ್ತಿ ಆ ನಂತರ ‘ನಿಮ್ಮ ದೇಹ ನನಗೆ ಇಷ್ಟ’ ಎಂದಿದ್ದಾನೆ. ನಂತರ ಇನ್ನೂ ಮುಂದುವರೆದು ನಿಮ್ಮ ಒಳ ಉಡುಪಿನ ಸೈಜ್ ಏನು ಎಂದು ಕೇಳಿದ್ದಾನೆ. ಆ ನೆಟ್ಟಿಗನ ಸಂದೇಶದ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿರುವ ನೇಹಾ, ‘ನಿನಗೆ ಬೈಯಲು ಪದಗಳು ಸಹ ಸಿಗುತ್ತಿಲ್ಲ’ ಎಂದಿದ್ದಾರೆ.
ಅಷ್ಟೇ ಅಲ್ದೇ ತಮಗೆ ಸಮಾಧಾನದ ಸಂದೇಶಗಳನ್ನು ಕಳುಹಿಸಿದವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ‘ನೀವೆಲ್ಲ ಏಕೆ ನನಗೆ ಮಾಧಾನ ಹೇಳುತ್ತಿದ್ದೀರಿ. ನಾನು ಎಷ್ಟು ಬಾರಿ ಇಂಥಹಾ ಕಿರುಕುಳ ತಡೆದುಕೊಂಡಿರಬೇಕು. ಇಂಥಹ ಜನರನ್ನು ಸುಮ್ಮನೆ ಬಿಟ್ಟರೆ ಇವರು ಇನ್ನೂ ಮುಂದಿನ ಹಂತಕ್ಕೆ ಹೋಗುತ್ತಾರೆ. ನಿಮಗೆ ನಿಜಕ್ಕೂ ನನ್ನ ಮೇಲೆ ಕಾಳಜಿ ಇದ್ದರೆ ಜವಾಬ್ದಾರಿಯಿಂದ ವರ್ತಿಸಿ ಇಂಥಹ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿ. ಮಹಿಳೆಯರಿಗೆ ಸಮಾಧಾನದಿಂದ ಇರುವಂತೆ ಪಾಠ ಮಾಡಬೇಡಿ’ ಎಂದಿದ್ದಾರೆ.
ಇನ್ನೂ ಈ ಬಗ್ಗೆ ಸರಣಿ ಪೋಸ್ಟ್ ಗಳನ್ನ ಮಾಡಿ ಮಾಹಿತಿ ನೀಡಿರುವ ನೇಹಾ ‘ನನ್ನ ಪರ ವಹಿಸಿದ, ನನ್ನ ಬಗ್ಗೆ ಕಾಳಜಿವಹಿಸಿದ ಎಲ್ಲರಿಗೂ ಧನ್ಯವಾದ. ನನಗೆ ಮೆಸೇಜ್ ಮಾಡಿದ ವ್ಯಕ್ತಿ ತನ್ನ ಖಾತೆ ಡಿಲೀಟ್ ಮಾಡಿದ್ದಾನೆ. ಆದರೆ ನಾನೂ ಪೊಲೀಸರಿಗೆ ದೂರವಾಣಿ ಮೂಲಕ ದೂರು ನೀಡಿದ್ದೇನೆ. ಕೂಡಲೇ ಅವರು ಸ್ಪಂದಿಸಿದ್ದಾರೆ’ ಎಂದಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.