ಬೆಂಗಳೂರು: ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನರಾಗಿದ್ದು, ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ʻʻಒಬ್ಬ Statesman ಎಲ್ಲಾ ಅರ್ಥಗಳಲ್ಲಿ ರಾಜಕಾರಣಿ ಎಂದಿಗೂ ಅಲ್ಲ. ಅವರು ಯಾರನ್ನೂ, ತಮ್ಮ ಪ್ರತಿಸ್ಪರ್ಧಿಗಳನ್ನು ಸಹ ದ್ವೇಷಿಸಿ ಮಾತನಾಡಲಿಲ್ಲ. ಭವಿಷ್ಯದ ದೃಷ್ಟಿಯುಳ್ಳವ, ದಯಾಮಯಿ ಅನುಕಂಪದಿಂದ ಕೂಡಿರುವ, ಸುಂದರವಾಗಿ ಮಾತನಾಡುವ, ವಿದ್ಯಾವಂತ, ಹಾಸ್ಯಭರಿತ ವ್ಯಕ್ತಿತ್ವದವರು ನೀವು… ನಿಮ್ಮಂತೆ ಮತ್ತೊಬ್ಬರು ಇರಲು ಆಗುವುದಿಲ್ಲ.
ಎಲ್ಲದಕ್ಕಾಗಿ ಧನ್ಯವಾದಗಳು… ಎಂದು ಬರೆದುಕೊಂಡಿದ್ದಾರೆ. ಕೊನೆಯಲ್ಲಿ ನೀವು ಈಗ ನಿಮ್ಮ ಬೆಸ್ಟ್ಫ್ರೆಂಡ್ ಜೊತೆಗೆ ಇದ್ದೀರಾ ಎಂದು ಬರೆದು ಹಾರ್ಟ್ ಎಮೊಜಿ ಹಾಕಿ ನೋವು ವ್ಯಕ್ತಪಡಿಸಿದ್ದಾರೆ.