ದಕ್ಷಿಣ ಭಾರತದ ನಟಿ ಸಮಂತಾಗೆ ಅಪಾರ ಅಭಿಮಾನಿ ಬಳಗವಿದೆ. ಈಗ ಅವರು ‘ಸಿಟಾಡೆಲ್ ಹನಿ ಬನಿ’ (Citadel Honey Bunny) ಸಕ್ಸಸ್ ಖುಷಿಯಲ್ಲಿದ್ದಾರೆ. ಆದರೆ, ಈಗ ಅವರ ಲಿಪ್ ಲಾಕ್ ದೃಶ್ಯಗಳು ವೈರಲ್ ಆಗಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
ವರುಣ್ ಧವನ್ ಜೊತೆ ನಟಿಸಿದ ವೆಬ್ ಸಿರೀಸ್ ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುವುದರೊಂದಿಗೆ ಇದರಲ್ಲಿನ ಲಿಪ್ ಲಾಕ್ ದೃಶ್ಯಗಳಲ್ಲಿ ಸಮಂತಾರನ್ನು (Samantha) ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.
Samantha Ruth comeback in Hotty Mode 💥
Very Tremendous Beauty, she is controlling total internet today💯#SamanthaRuthPrabhu #CitadelHoneyBunny pic.twitter.com/Eg0Jt093kH
— isha (@BadassBebo) November 7, 2024
‘ಸಿಟಾಡೆಲ್ ಹನಿ ಬನಿ’ ವೆಬ್ ಸಿರೀಸ್ನಲ್ಲಿ ನಟಿ ಸಖತ್ ಹಾಟ್ ಅವತಾರ ತಾಳಿದ್ದಕ್ಕೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಸಮಂತಾ ಅವರ ಕಿಸ್ಸಿಂಗ್ ದೃಶ್ಯಗಳು ವೈರಲ್ ಆಗುತ್ತಿವೆ. ಹಲವರು ಹಲವಾರು ರೀತಿ ಕಮೆಂಟ್ ಮಾಡುತ್ತಿದ್ದಾರೆ. ಇದೇ ವೆಬ್ ಸಿರೀಸ್ ನ ಹಾಲಿವುಡ್ ವರ್ಷನ್ ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಭಾರತೀಯ ವರ್ಷನ್ಗೆ ತಕ್ಕಂತೆ ‘ಸಿಟಾಡೆಲ್ ಹನಿ ಬನಿ’ ಚಿತ್ರೀಕರಣ ಮಾಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವರುಣ್ (Varun Dhawan) ಮತ್ತು ಸಮಂತಾ ಜೊತೆಯಾಗಿ ನಟಿಸಿದ್ದಾರೆ.