ಬೆಂಗಳೂರು : ಕಳೆದ ತಿಂಗಳು ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಅಪಘಾತಕ್ಕೀಡಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹಲವು ವದಂತಿಗಳು ಹರಿದಾಡಿದ್ದವು. ಶರ್ಮಿಳಾ ಅವರು ಲಾಕ್ ಡೌನ್ ನಡುವೆ ಜಾಲಿ ರೈಡ್ ಹೋಗಿದ್ರು. ಲೇಟ್ ನೈಟ್ ಪಾರ್ಟಿ ಮುಗಿಸಿ ಬರುವಾದ ಆಕ್ಸಿಡೆಂಟ್ ಆಗಿದ್ದು, ಶರ್ಮಿಳಾ ಅವರು ಪ್ರಕರಣದ ದಿಕ್ಕು ತಪ್ಪಿಸಲು ವಿವಿಧ ಆಸ್ಪತ್ರೆಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ದಾಖಲಾಗಿದ್ದರು ಎಂದು ಹೇಳಲಾಗಿತ್ತು. ಈ ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡುವಂತೆ ಘಟನೆ ಬಳಿಕ ಶರ್ಮಿಳಾ ಮಾಂಡ್ರೆ ಯಾರ ಕೈಗೂ ಸಿಕ್ಕಿರಲಿಲ್ಲ. ಘಟನೆ ನಡೆದು ಒಂದು ತಿಂಗಳ ಬಳಿಕ ಅಪಘಾತದ ಬಗ್ಗೆ ಶರ್ಮಿಳಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಪಘಾತವಾದ ಸಂದರ್ಭದಲ್ಲಿ ನನ್ನ ಸುತ್ತಲೂ ಹಲವು ಕಥೆಗಳು ಹುಟ್ಟಿಕೊಂಡಿದ್ದವು. ಅಪಘಾತದಲ್ಲಿ ನನಗೆ ತೀವ್ರ ಗಾಯಗಳಾಗಿದ್ದವು. ಆ ಸಂದರ್ಭದಲ್ಲಿ ಬೇಗ ಗುಣಮುಖವಾಗುವುದು ನನ್ನ ಉದ್ದೇಶ ಆಗಿತ್ತು ಎಂದು ಬರೆದುಕೊಂಡಿದ್ದಾರೆ.
There are many stories about me which were circulated at the time of the accident . Unfortunately I suffered from multiple fractures and at that time my main intention was to get better.
— Sharmiela Mandre (@sharmilamandre) May 22, 2020
ಇದರ ಬೆನ್ನಲ್ಲೆ ಮತ್ತೊಂದು ಟ್ವೀಟ್ ಮಾಡಿರುವ ಅವರು, ನಾನು ಗುಣಮುಖರಾಗಲು ಹಾರೈಸಿದ ಕುಟುಂಬಸ್ಥರು, ಸ್ನೇಹಿತರಿಗೆ ಧನ್ಯವಾದ. ಸದ್ಯ ನಾನು ಚೇತರಿಕೆ ಕಾಣುತ್ತಿದ್ದು, ಸೂಕ್ತ ಚಿಕಿತ್ಸೆ ನೀಡಿದ ವೈದ್ಯರಿಗೂ ಧನ್ಯವಾದ ಎಂದಿದ್ದಾರೆ.