ಬಾಲಿವುಡ್ ನಟಿ ವಿದ್ಯಾ ಬಾಲನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಭಾರೀ ಬೇಡಿಕೆಯ ನಟಿಯಾಗಿದ್ದ ನಟಿ, ಇಂದು ತೆರೆಯ ಹಿಂದೆ ಸರಿದಿದ್ದಾರೆ. ಆದರೆ, ಆಗಾಗ ಒಂದೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ನ ಮದುವೆ ಆಗಿದ್ದಾರೆ. ಇತ್ತೀಚೆಗೆ ಮದುವೆ ಬಗ್ಗೆ ಮಾತನಾಡಿದ್ದು, ಮೊದಲ ಭೇಟಿ ಹೇಗಿತ್ತು ಎಂಬುವುದನ್ನು ವಿವರಿಸಿದ್ದಾರೆ.
ನಟಿ ಬಾಲನ್ ಅವರ ‘ಲವ್ ಎಟ್ ಫಸ್ಟ್ ಸೈಟ್’ ಬಗ್ಗೆ ಈಗ ಸುದ್ದಿಯಾಗಿದ್ದು, ‘ನಾನು ಸಿದ್ದಾರ್ಥ್ ಅವರನ್ನು ಮೊದಲ ಬಾರಿಗೆ ನೋಡಿದಾಗ ದೈಹಿಕವಾಗಿ ಅವರಿಗೆ ಅಟ್ರ್ಯಾಕ್ಟ್ ಆದೆ. ಅವರು ಸಖತ್ ಹ್ಯಾಂಡ್ಸಮ್. ಹೆಚ್ಚು ಖಾಸಗಿ ಆಗಿರಲು ಇಷ್ಟಪಡುತ್ತಿದ್ದರು. ಇದರಿಂದ ಹೆಚ್ಚು ಸುರಕ್ಷಿತ ಎನಿಸಿತು ಎಂದು ಬಾಲನ್ ಹೇಳಿದ್ದರು.
ಜನಪ್ರಿಯತೆ ವಿದ್ಯಾಗೆ ಹೊಸತಾಗಿದ್ದರಿಂದ ಅವರು ಯಾರಿಗೂ ಹತ್ತಿರ ಆಗಿರಲಿಲ್ಲ. ಆಗ ಅವರಿಗೆ ಕಂಡಿದ್ದು ಸಿದ್ಧಾರ್ಥ. ವಿದ್ಯಾ ಬಾಲನ್ ಈ ಮೊದಲು ಡೇಟ್ ಮಾಡಿದ್ದರು. ಆದರೆ, ಅದು ಬ್ರೇಕಪ್ನಲ್ಲಿ ಕೊನೆ ಆಯಿತು. ಹೀಗಾಗಿ, ಸಿದ್ದಾರ್ಥ್ನ ಮದುವೆ ಆಗುವ ಯಾವುದೇ ಆಲೋಚನೆ ವಿದ್ಯಾಗೆ ಇರಲಿಲ್ಲ.
ವಿದ್ಯಾ ಬಾಲನ್ 30 ವರ್ಷದವರಾಗಿದ್ದಾಗ ಸಾಕಷ್ಟು ಖ್ಯಾತಿ ಪಡೆದಿದ್ದರು. ನಂತರ, ಒಂಟಿತನವನ್ನು ಅನುಭವಿಸಲು ಪ್ರಾರಂಭಿಸಿದರು. ಹೀಗಾಗಿ, ಅವರಿಗೆ ಒಬ್ಬರು ಬೇಕಿತ್ತು. ದಿನದ ಕೊನೆಯಲ್ಲಿ ನಿಮ್ಮ ಗೆಲುವು ಮತ್ತು ಸೋಲುಗಳನ್ನು ಹಂಚಿಕೊಳ್ಳಲು ಒಬ್ಬರು ಬೇಕು ಎಂದಿದ್ದರು.
ವಿದ್ಯಾ ಬಾಲನ್ ಈ ವರ್ಷ ‘ಭೂಲ್ ಭುಲಯ್ಯ 3’ ಚಿತ್ರದಲ್ಲಿ ಮಂಜುಲಿಕಾ ಆಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಅವರು ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ.
ಕೆಡಿ ಚಿತ್ರತಂಡಕ್ಕೆ ಬಿಗ್ ಶಾಕ್: ಅಶ್ಲೀಲತೆಯ ಆರೋಪದಡಿ ನೋರಾ-ಧ್ರುವ ಹೆಜ್ಜೆ ಹಾಕಿದ ಸರ್ಕೆ ಚುನರ್ ಹಾಡು ನಿಷೇಧಕ್ಕೆ ಮುಂದಾದ ಕೇಂದ್ರ ಸರ್ಕಾರ!
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ: ದಿ ಡೆವಿಲ್ ಚಿತ್ರತಂಡಕ್ಕೆ ಭಾರಿ ಆಘಾತ ಎದುರಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮತ್ತು ಶೋ ಮ್ಯಾನ್...








