Adam Gilchrist | ಬಿಸಿಸಿಐಗೆ ಆಡಂ ವಿಶೇಷ ಮನವಿ
ಭಾರತೀಯ ಕ್ರಿಕೆಟಿಗರು ವಿದೇಶಿ ಲೀಗ್ ಗಳಲ್ಲಿ ಆಡದಿರುವ ಬಗ್ಗೆ ಲೆಜೆಂಡರಿ ವಿಕೆಟ್ ಕೀಪರ್, ಆಸೀಸ್ ಮಾಜಿ ಆಟಗಾರ ಆಡಂ ಗಿಲ್ ಕ್ರಿಸ್ಟ್ ಸ್ಪಂದಿಸಿದ್ದಾರೆ.
ಈ ವಿಚಾರದಲ್ಲಿ ಬಿಸಿಸಿಐ ಕೊಂಚ ದಾರಾಳತೆ ತೋರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಶ್ವದಾದ್ಯಂತ ಟೀಂ ಇಂಡಿಯಾದ ಆಟಗಾರರಿಗೆ ಇರುವ ಕ್ರೇಜ್ ಅನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಆಟಗಾರರನ್ನು ವಿದೇಶಿ ಟಿ 20 ಲೀಗ್ ಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಬಿಸಿಸಿಐಗೆ ಆಡಂ ಕೋರಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟಿಗರು ಬಿಗ್ ಬ್ಯಾಷ್ ಲೀಗ್, ಕೆರಬಿಯನ್ ಪ್ರಿಮಿಯರ್ ಲೀಗ್ ನಂತಹ ಫಾರಿನ್ ಲೀಗ್ಸ್ ಗಳಲ್ಲಿ ಆಡುವುದರಿಂದ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗಬಹುದು ಎಂದು ಬಿಸಿಸಿಐಗೆ ಮನವರಿಕೆ ಮಾಡಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ಆಟಗಾರರು ವಿದೇಶಿ ಲೀಗ್ ಗಳಲ್ಲಿ ಆಡುವುದರಿಂದ ಅದು ಕ್ರಿಕೆಟ್ ಬೆಳವಣಿಗೆಗೆ ಸಹಾಯಕವಾಗಿರಲಿದೆ. ವಿದೇಶಿ ಲೀಗ್ ನಲ್ಲಿ ಭಾರತೀಯ ಕ್ರಿಕೆಟಿಗರು ಆಡಿದ್ರೆ ಅದ್ಭುತವಾಗಿರುತ್ತದೆ.
ಐಪಿಎಲ್ ನಲ್ಲಿ ಆರು ಸೀಸನ್ ಗಳನ್ನು ಆಡಿದ ಅನುಭವದಲ್ಲಿ ಈ ವಿಷಯವನ್ನು ವಾದಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಐಪಿಎಲ್ ಪ್ರಪಂಚದಲ್ಲಿಯೇ ಟಾಪ್ ಟಿ 20 ಲೀಗ್, ಅದನ್ನ ನಡೆಸುತ್ತಿರುವ ಬಿಸಿಸಿಐ ಪ್ರಪಂಚ ಕ್ರಿಕೆಟ್ ಗೆ ದೊಡ್ಡಣ್ಣನಂತೆ ಎಂದು ಆಡಂ ಅಭಿಪ್ರಾಯಪಟ್ಟಿದ್ದಾರೆ.