ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ : ಪ್ರಧಾನಿಗೆ ಎಂಇಎಸ್ ಪತ್ರ
ಬೆಳಗಾವಿ : ಗಡಿ ವಿಚಾರವಾಗಿ ಎಂಇಎಸ್ ಪ್ರಧಾನಿಗೆ ಪತ್ರ ಅಭಿಯಾನ ಆರಂಭಿಸಿದ್ದು, ಬೆಳಗಾವಿ, ನಿಪ್ಪಾಣಿ, ಖಾನಾಪುರ ಮತ್ತು ಬೀದರ್ ಜಿಲ್ಲೆಯ ಗಡಿ ಭಾಗದ 865 ಮಹಾರಾಷ್ಟ್ರಕ್ಕೆ ಸೇರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಾಗಿದೆ.
ಎಂಇಎಸ್ ನ ಯುವ ಘಟಕ ಈ ಅಭಿಯಾನ ನಡೆಸುತ್ತಿದ್ದು, ಪೆÇೀಸ್ಟ್ ಕಾರ್ಡ್ ಅಭಿಯಾನದಲ್ಲಿ ಬೆಳಗಾವಿ, ನಿಪ್ಪಾಣಿ, ಖಾನಾಪುರ ಮತ್ತು ಬೀದರ್ ಜಿಲ್ಲೆಯ ಗಡಿ ಭಾಗದ 865 ಮಹಾರಾಷ್ಟ್ರಕ್ಕೆ ಸೇರಿಸುವಂತೆ ಆಗ್ರಹಿಸಲಾಗುತ್ತಿದೆ.
ಭಾಷಾವಾರು ಪ್ರಾಂತ ರಚನೆಯಾದ ದಿನದಿಂದ ಮರಾಠಿ ಭಾಷಿಕರಿಗೆ ಅನ್ಯಾಯ ಆಗುತ್ತಿದೆ. 1956 ರಿಂದ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದೇವೆ.
65 ವರ್ಷಗಳಿಂದ ಕನ್ನಡ ಭಾಷಿಕ ರಾಜ್ಯದಲ್ಲಿ ಗಡಿ ಭಾಗದ ಮರಾಠಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಎಂಇಎಸ್ ಪತ್ರದಲ್ಲಿ ಆರೋಪಿಸಿದೆ.
ಅಲ್ಲದೆ ಈ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿ ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿಕೊಂಡಿದೆ.
ಇನ್ನು ಎಂಇಎಸ್ ಈಗಾಗಲೇ 11 ಸಾವಿರ ಪತ್ರಗಳನ್ನು ಪೆÇೀಸ್ಟ್ ಮಾಡಿರುವುದಾಗಿ ಹೇಳಿಕೊಂಡಿದೆ.









