ಬೆಂಗಳೂರು, ಜೂನ್ 3 : ಹೊರ ರಾಜ್ಯಗಳಿಂದ ಬಂದು ಹೋಂ ಕ್ವಾರಂಟೈನ್ ನಲ್ಲಿರುವವರ ಮನೆ ವಿಳಾಸವೀಗ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಕೋವಿಡ್-19 . ಕರ್ನಾಟಕ. ಗೌ.ಇನ್ ವೆಬ್ ಸೈಟ್ ನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವವರ ಹೆಸರು ಮತಿತ್ತರ ವೈಯಕ್ತಿಕ ವಿಷಯಗಳ ಜೊತೆಗೆ ಮನೆ ವಿಳಾಸವನ್ನು ಹಾಕಲಾಗುತ್ತಿದೆ. ಈಗಾಗಲೇ ರಾಜ್ಯ ಕೋವಿಡ್-19 ವಾರ್ ರೂಮ್ ಉಸ್ತುವಾರಿ ಮುನಿಷ್ ಮೌದ್ಗಿಲ್ ಅವರು ಹೊರ ರಾಜ್ಯದಿಂದ ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬ ವ್ಯಕ್ತಿಯೂ 14 ದಿನಗಳ ಹೋಮ್ ಕ್ವಾರಂಟೈನ್ ಗೆ ಒಳಗಾಗಲೇಬೇಕು.
ಮಹಾರಾಷ್ಟ್ರದಿಂದ ಬಂದವರು 7 ದಿನಗಳ ಹೆಚ್ಚುವರಿ ಸಾಂಸ್ಥಿಕ ಕ್ವಾರಂಟೈನ್ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. ಹೊರರಾಜ್ಯದಿಂದ ಬರುತ್ತಿರುವವರಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಅವರು ಕ್ವಾರಂಟೈನ್ ನಿಂದ ತಪ್ಪಿಸಿಕೊಳ್ಳುತ್ತಿರುವುದು ವರದಿಯಾಗಿದೆ. ಹಾಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬುದಾಗಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾರಾದರೂ ಕ್ವಾರಂಟೈನ್ ಗೆ ಒಳಗಾದಾಗ ಅದನ್ನು ನೆರೆಹೊರೆಯವರಲ್ಲಿ ಮುಚ್ಚಿಡುವ ಅಗತ್ಯತೆ ಏನಿದೆ ಎಂದು
ಬೆಳ್ಳಂದೂರು ನಿವಾಸಿ ಜಯಕುಮಾರ್ ಹೇಳಿದ್ದರೆ,ಹೋಮ್ ಕ್ವಾರಂಟೈನ್ ಗೆ ಒಳಗಾಗುವವರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಾದರು ಏನಿರುತ್ತದೆ? ಎಂದು ಸಿಟಿಜನ್ ಆಫ್ ಬೆಂಗಳೂರು ಸದಸ್ಯರಾದ ತಾರಾ ಕೃಷ್ಣಸ್ವಾಮಿ ಪ್ರಶ್ನಿಸಿದ್ದಾರೆ.
ಕೊರೋನಾ ಸೋಂಕಿನ ವಿಚಾರದಲ್ಲಿ ನಾವು ಸಾರ್ವಜನಿಕ ಆರೋಗ್ಯ ವಿಚಾರವೆಂದು ಪರಿಗಣಿಸುವಂತಿಲ್ಲ.
ವಲಸೆ ಕಾರ್ಮಿಕರು, ವಲಸೆ ವಿದ್ಯಾರ್ಥಿಗಳು, ಹೊರಗಿನ ದೇಶದಿಂದ ಪ್ರಯಾಣಿಸಿದವರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಎಲ್ಲಿಂದ ಬರುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ, ಅವರ ಕುಟುಂಬ ಸದಸ್ಯರು ಇದ್ದಾರೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಹಾಕಲಾಗಿದೆ ಎಂದು ಮುನಿಷ್ ಮೌದ್ಗಿಲ್ ತಿಳಿಸಿದ್ದಾರೆ.








