‘ಅಧೀರನ’ ಫಸ್ಟ್ ಝಲಕ್ ರಿಲೀಸ್ ಮಾಡಿದ ರಾಮ್-ತಾರಕ್-ಮೌಳಿ
ಸೂಪರ್ ಹೀರೋ ಹನುಮಾನ್, ಆಕ್ಷನ್ ಥ್ರಿಲ್ಲರ್ ಕಲ್ಕಿ, ಜೊಂಬಿ ರೆಡ್ಡಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಕ್ರಿಯೇಟಿವ್ ಜೀನಿಯಸ್ ಡೈರೆಕ್ಟರ್ ಪ್ರಶಾಂತ್ ವರ್ಮಾ ಟಾಲಿವುಡ್ ಅಂಗಳಕ್ಕೆ ಮತ್ತೊಬ್ಬ ಹೊಸ ಹೀರೋ ಪರಿಚಯ ಮಾಡಿದ್ದಾರೆ. ಜೊತೆಗೆ ಮತ್ತೊಂದು ಸೂಪರ್ ಹೀರೋ ಸಿನಿಮಾವನ್ನು ಚಿತ್ರರಸಿಕರ ಮಡಿಲಿಗೆ ಹಾಕ್ತಿದ್ದಾರೆ.
ಅಧೀರ ಫಸ್ಟ್ ಝಲಕ್ ಔಟ್!
ಸೌತ್ ಇಂಡಸ್ಟ್ರೀಯ ಖ್ಯಾತ ನಿರ್ಮಾಪಕ ದಾನಯ್ಯ ಸುಪುತ್ರ ಕಲ್ಯಾಣ್ ದಾಸರಿ ಹೀರೋ ಆಗಿ ಅಧೀರ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಅಧೀರಾ ಚಿತ್ರದ ಮೊದಲ ನೋಟವನ್ನು ಚಿತ್ರಬ್ರಹ್ಮ ಎಸ್ ಎಸ್ ರಾಜಮೌಳಿ, ಖ್ಯಾತ ನಟರಾದ ಜೂನಿಯರ್ ಎನ್ ಟಿಆರ್, ರಾಮ್ ಚರಣ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಹೇಗಿದೆ ಅಧೀರ ಮೊದಲ ನೋಟ?
ಬಾಲ್ಯದಿಂದಲೇ ಅಧೀರನಲ್ಲಿ ಒಂದು ಮಹಾನ್ ಶಕ್ತಿ ಅಡಕವಾಗಿರುತ್ತೇ. ಆತ ಬೆಳೆದಂತೆಲ್ಲಾ ಬಲಿಶಾಲಿಯಾಗಿ ಧೀರ-ಶೂರನಾಗಿ ಬೆಳೆಯುತ್ತಾನೆ. ಎಲ್ಲಾ ಸೂಪರ್ ಹೀರೋಗಳಂತೆ ಈತ ದುಷ್ಟರನ್ನು ನಾಶ ಮಾಡಿ, ಮುಗ್ದರನ್ನು ರಕ್ಷಿಸುತ್ತಾನೆ. ಸಖತ್ ಪವರ್ ಫುಲ್ ಆಗಿ ಮೂಡಿ ಬಂದಿರುವ ಅಧೀರ ಟೀಸರ್ ಕೊನೆಯ ಭಾಗದಲ್ಲಿ ಇಂದ್ರನ ವಜ್ರಾಯುಧ ಮಾದರಿಯಲ್ಲೊಂದು ಆಯುಧ ಪ್ರದರ್ಶಿಸಿರುವ ನಿರ್ದೇಶಕ ಪ್ರಶಾಂತ್ ಟೀಸರ್ ಕಣ್ಣಿಗೆ ಹಬ್ಬದಂತಿದೆ. ಹಾಲಿವುಡ್ ದೃಶ್ಯ ವೈಭೋಗದ ಮೆರುಗು ಟೀಸರ್ ಗುಣಮಟ್ಟವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯದಿದೆ.
ಭಾರತದ ಪೌರಾಣಿಕ ಪಾತ್ರಗಳಿಂದ ಸ್ಫೂರ್ತಿ ಪಡೆದ ನಿರ್ದೇಶಕ ಪ್ರಶಾಂತ್ ವರ್ಮಾ, ಹಾಲಿವುಡ್ ಸಿನಿಮಾಗಳಾದ ಮಾರ್ವೆಲ್ ಮತ್ತು ಡಿಸಿಯಂತ ಸೂಪರ್ ಹೀರೋಗಳ ಕನ್ಸೆಪ್ಟ್ ನಲ್ಲಿ ಅಧೀರಾ ಸಿನಿಮಾವನ್ನು ತಯಾರಿಸ್ತಿದ್ದು, ಅದ್ಭುತ ಸಾಹಸ ದೃಶ್ಯಗಳು ಸಿನಿಮಾದಲ್ಲಿರಲಿವೆ. ಮೊದಲ ಟೀಸರ್ ಝಲಕ್ ನಲ್ಲಿ ಕಲ್ಯಾಣ್ ಭರವಸೆಯ ನಾಯಕ ಅನ್ನೋದನ್ನು ಪ್ರೋವ್ ಮಾಡಿದ್ದಾರೆ. ಅಂದಹಾಗೇ ಅಧೀರ ಸಿನಿಮಾವನ್ನು ಪ್ರೈಮ್ ಶೋ ಎಂಟರ್ ಟೈನರ್ ಬ್ಯಾನರ್ ನಡಿ ಕೆ ನಿರಂಜನ್ ರೆಡ್ಡಿ ಅದ್ಧೂರಿಯಾಗಿ ನಿರ್ಮಾಣ ಮಾಡ್ತಿದ್ದು, ಚೈತನ್ಯ ಅರ್ಪಿಸ್ತಿದ್ದಾರೆ. ಗೌರಿಹರಿ ಮ್ಯೂಸಿಕ್, ದಾಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್ ಸಿನಿಮಾಕ್ಕಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಅಂದ್ರೆ ಪ್ಯಾನ್ ಇಂಡಿಯಾ ಕನ್ಸೆಪ್ಟ್ ನಲ್ಲಿ ಅಧೀರ ಸಿನಿಮಾ ತಯಾರಾಗ್ತಿದೆ. adhira movie first look release