ಆದಿಪುರುಷ್ ಫಸ್ಟ್ ಲುಕ್ ಬಿಡುಗಡೆ – ರಾಮನಾಗಿ ಕಾಣಿಸಿಕೊಂಡ ಪ್ರಭಾಸ್
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಬಹು ನೀರಿಕ್ಷಿತ ಚಿತ್ರ ಆದಿಪುರುಷ್ ಚಿತ್ರ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಅಕ್ಟೋಬರ್ 2 ರಂದು ಸಂಜೆ 7:11 ಕ್ಕೆ ಆದಿಪುರುಷ್ ಚಿತ್ರದ ಟೀಸರ್ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಚಿತ್ರತಂಡ ಟೀಸರ್ ಪೋಸ್ಟರ್ ಅನ್ನ ಬಿಡುಗಡೆಯಾಗಿದೆ.
ಪ್ರಭಾಸ್ ರಾಮನಾಗಿ ನಟಿಸುತ್ತಿದ್ದು ಕೃತಿ ಸನೂನ್ ಸೀತೆಯ ಪಾತ್ರ ಮಾಡುತ್ತಿದ್ದಾರೆ. ಸೈಫ್ ಆಲಿ ಖಾನ್ ರಾವಣ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬಾಹುಬಲಿ ಚಿತ್ರದ ಮೂಲಕ ಪ್ರಭಾಸ್ ಪೌರಾಣಿಕ ಚಲನಚಿತ್ರಗಳಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಜಲಕ್ ತೋರಿಸಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಆದಿಪುರುಷ್ ಚಿತ್ರ ಈ ಹಿಂದೆಯೇ ಚಿತ್ರಿಕರಣವನ್ನ ಪೂರೈಸಿತ್ತು ಹಲವು ಕಾರಣಗಳಿಂದಾಗಿ ಚಿತ್ರ ಬಿಡುಗಡೆಗೆ ನಿಧನವಾಗಿತ್ತು.
ಚಿತ್ರವನ್ನ ಓಂ ರಾವತ್ ಡೈರೆಕ್ಟ್ ಮಾಡುತ್ತಿದ್ದಾರೆ. ಜನವರಿ 12 ರಂದು ಚಿತ್ರ ವಿಶ್ವಾದ್ಯಂತ ತೆರೆಗೆ ಬರುತ್ತಿದೆ.
Adipurush first look: Prabhas transforms into Lord Ram’s warrior side as he aims his bow towards the sky. See here








