‘ಆದಿಪುರುಷ್’ ಗೆ ಸ್ಟಾರ್ ನಟಿ ಎಂಟ್ರಿ : ಯಾರು ಗೊತ್ತಾ..!
ಪ್ರಭಾಸ್ ನಟನೆಯ ಬಹುನಿರೀಕ್ಷೆಯ ಸಿನಿಮಾದ ಆದಿಪುರುಷ್ ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದ್ದು, ಕಲಾವಿದರ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. ಅದ್ರಲ್ಲೂ ಪ್ರಭಾಸ್ ಗೆ ನಾಯಕಿ ಯಾರಾಗಲಿದ್ದಾರೆ ಅನ್ನೋ ಕತೂಹಲಗಳು ಮನೆ ಮಾಡಿವೆ.
ಈ ಮಧ್ಯೆ ಈ ಸಿನಿಮಾಗೆ ಮತ್ತೋರ್ವ ಸ್ಟಾರ್ ನಟಿ ಎಂಟ್ರಿಯಾಗಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ರಾವಣನಾಗಿ ಸೈಫ್ ಅಲಿಖಾನ್ ಕಾಣಿಸಿಕೊಳ್ತಿದ್ದಾರೆ. ನಾಯಕಿಯ ಪಾತ್ರಕ್ಕೆ ಕೃತಿ ಸನೋನ್ ಸೇರಿದಂತೆ ಹಲವರ ಹೆಸರುಗಳು ಕೇಳಿಬರ್ತಿವೆ. ಕೃತಿ, ಸೀತೆ ಪಾತ್ರದಲ್ಲಿ ಬಣ್ಣ ಹಚ್ಚುವುದು ಬಹುತೇಕ ಖಚಿತವಾಗಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಇನ್ನೂ ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದ್ರ ಬೆನ್ನಲ್ಲೇ ಸಿನಿಮಾದಲ್ಲಿ ಪ್ರಬಾಸ್ ತಾಯಿ ಪಾತ್ರದಲ್ಲಿ ಖ್ಯಾತ ನಟಿ ಹೇಮಾ ಮಾಲಿನಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ರಾಜ್ಯಕ್ಕೆ ಬರಬೇಕಿರೋ ಜಿಎಸ್ ಟಿ ಹಣದಲ್ಲಿ 1500 ಕೋಟಿ ಕಡಿತವಾಗಬಹುದು
ಹೌದು ಆದಿಪುರುಷ್ ಸಿನಿಮಾದಲ್ಲಿ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ‘ರಾಮನಿ’ಗೆ ತಾಯಿಯಾಗಿ ಹೇಮಾ ಮಾಲಿನಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ. ಕೌಸಲ್ಯ ಪಾತ್ರದಲ್ಲಿ ಹೇಮಾ ಮಾಲಿನಿ ನಟಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇತ್ತ ಪ್ರಭಾಸ್ ಅವರು ಮತ್ತೊಂದು ಹೈ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ಅವರ ಸಾರಥ್ಯದಲ್ಲಿ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel