ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಹೆಸರೇನು ಗೊತ್ತಾ..
ಹೀರೋ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಆದಿ ಪುರುಷ ಚಿತ್ರವೂ ಒಂದು. ಬಾಲಿವುಡ್ ನಿರ್ದೇಶಕ ಓಂ ರೌತ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ಓಂ ರೌತ್ ಆದಿ ಪುರುಷ್ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ. ಈ ಸಿನಿಮಾದಲ್ಲಿ ತಾಂತ್ರಿಕ ಕೆಲಸಗಳಿದ್ದು, ಸುಮಾರು 400 ಕೋಟಿ ಬಜೆಟ್ ನಲ್ಲಿ ಚಿತ್ರ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಆದಿಪುರುಷನ ಕಥೆಯನ್ನಾಧರಿಸಿ ಸಿನಿಮಾ ಮಾಡಬೇಕು ಎಂಬ ಆಸೆ ನನಗಿತ್ತು. ಈ ಕ್ರಮದಲ್ಲಿ ನಾನು ಲಾಕ್ಡೌನ್ನಲ್ಲಿ 45 ದಿನಗಳಲ್ಲಿ ಆದಿಪುರುಷ ಸ್ಕ್ರಿಪ್ಟ್ ಅನ್ನು ಪೂರ್ಣಗೊಳಿಸಿದೆ. ಕಥೆ ಬರೆದಾಗಿನಿಂದ ನನ್ನ ಮನಸ್ಸಿನಲ್ಲಿ ಪ್ರಭಾಸ್ ಒಬ್ಬರೇ ಇದ್ದಾರೆ.
ಪ್ರಭಾಸ್ ಒಬ್ಬರೇ ಈ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುವಂತಿತ್ತು. ಕಥೆ ಮುಗಿದ ಮೇಲೆ ಪ್ರಭಾಸ್ ಫೋನ್ ಮಾಡಿ, ಕಥೆಯ ಬಗ್ಗೆ ಹೇಳಿದ್ದೆ. ಕೇವಲ ಮೂರು ದೃಶ್ಯಗಳನ್ನು ಕೇಳಿದ ನಂತರ ಪ್ರಭಾಸ್ ಓಕೆ ಮಾಡಿದ್ರು. ಆ ನಂತರ ಹೈದರಾಬಾದಿಗೆ ಹೋದಾಗ ಪೂರ್ತಿ ಕಥೆ ಕೇಳಿದರು.
ವಾಲ್ಮೀಕಿ ಬರೆದ ರಾಮಾಯಣದ ಮುಖ್ಯ ಅಂಶಗಳನ್ನು ‘ಆದಿಪುರುಷ’ದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ 7000 ವರ್ಷಗಳ ಹಿಂದಿನ ಸೆಟ್ ಅನ್ನು ಹಾಕಲಾಗಿದೆ. ಆಧುನಿಕ ಕಥನ ವಿಧಾನಗಳೊಂದಿಗೆ ರಾಮಾಯಣದ ಕಥೆಯನ್ನು ಹೇಳುತ್ತೇನೆ. ಈ ಚಿತ್ರದಲ್ಲಿ ಪ್ರಭಾಸ್ ಪಾತ್ರದ ಹೆಸರು ರಾಮ ಅಲ್ಲ. ರಾಮನ ಇನ್ನೊಂದು ಹೆಸರು ರಾಘವ. ಕೃತಿ ಸುನನ್ ನಿರ್ವಹಿಸಿದ ಸೀತಾ ಪಾತ್ರವನ್ನು ಜಾನಕಿ ಎಂದು ಕರೆಯಲಾಗುತ್ತದೆ. ಸೈಫ್ ಅಲಿ ಖಾನ್ ರಾವಣನ ಪಾತ್ರಕ್ಕೆ ಲಂಕೇಶ್ ಎಂದು ಹೆಸರಿಟ್ಟಿದ್ದೇವೆ. ಈ ಎಲ್ಲಾ ಹೆಸರುಗಳನ್ನು “ರಾಮಾಯಣ” ದಿಂದ ತೆಗೆದುಕೊಳ್ಳಲಾಗಿದೆ. ಆದಿಪುರುಷ ಎಂದರೆ ‘ಮೊದಲ ಮನುಷ್ಯ’ ಎಂದರ್ಥ. ಆದರೆ ನಾವು ಅದನ್ನು ‘ಅತ್ಯುತ್ತಮ ಮನುಷ್ಯ’ ಅನ್ನೋ ಅರ್ಥದಲ್ಲಿ ತೆಗೆದುಕೊಂಡಿದ್ದೇವೆ ಎಂದಿದ್ದಾರೆ ನಿರ್ದೇಶಕ ಓಂ ರೌತ್.
adipurush-Om Raut reveals character names of Prabhas