Adipurush
‘ಶ್ರೀರಾಮನಾಗಿ’ ಅಭಿಮಾನಿಗಳಿಗೆ ಪ್ರಭಾಸ್ ದರ್ಶನ ಯಾವಾಗ ಗೊತ್ತಾ..!
ಪ್ರಸ್ತು ದಕ್ಷಿಣಭಾರತವಷ್ಟೇ ಅಲ್ಲದೇ ಇಡೀ’ಶ್ರೀರಾಮನಾಗಿ’ ಅಭಿಮಾನಿಗಳಿಗೆ ಪ್ರಭಾಸ್ ದರ್ಶನ ಯಾವಾಗ ಗೊತ್ತಾ..! ಭಾರತೀಯ ಚಿತ್ರರಂಗದಲ್ಲೇ ಭಾರೀ ಸಂಚಲನ ಸೃಷ್ಟಿಸಿರುವ ಸಿನಿಮಾವೆಂದ್ರೆ ಅದು ಡಾರ್ಲಿಂಗ್ ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರ. ಈ ಚಿತ್ರ ರಾಮಾಯಣ ಆಧಾರಿತವಾಗಿದ್ದು, ನಟ ಪ್ರಭಾಸ್ ಅವರು ಶ್ರೀರಾಮನಾಗಿ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಇದು ಪ್ರಭಾಸ್ ನಟನೆಯ 22ನೇ ಸಿನಿಮಾ ಆಗಿದೆ. ವಿಶೇಷ ಅಂದ್ರೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ಬಹುನಿರೀಕ್ಷೆಯ ಚಿತ್ರವಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಯಾವಾಗ ತೆರೆಗಪ್ಪಳಿಸಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಸಿನಿಪ್ರಿಯರ ಕುತೂಹಲಕ್ಕೆ ತೆರೆಬಿದ್ದಿದೆ. ಸಿನಿಮಾದ ರಿಲೀಸ್ ದಿನಾಂಕವನ್ನ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಅಂದ್ಹಾಗೆ 2022ರ ಆಗಸ್ಟ್ 11 ರಂದು ಈ ಸಿನಿಮಾ ತೆರೆಗೆ ಬರಲಿದೆ. 3ಡಿ ವರ್ಷನ್ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ.
ಹೌದು.. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಿರುವ ಆದಿಪುರುಷ್ ಚಿತ್ರೀಕರಣ ಮುಂದಿನ ವರ್ಷ ಅಂದ್ರೆ 2021ರ ಜನವರಿಯಲ್ಲಿ ಆರಂಭವಾಗಲಿದೆ. ಇನ್ನೂ ಆದಿಪುರುಷ್ ಸಿನಿಮಾ 500 ಕೋಟಿ ಬಜೆಟ್ ನಲ್ಲಿ ಮೂಡಿಬರುತ್ತಯಿರುವ ಹೈ ವೋಲ್ಟೇಜ್ ಸಿನಿಮಾವಾಗಿದ್ದು, ಈ ಚಿತ್ರವೂ ಸಹ ಬಾಹುಬಲಿ ಮಾದರಿಯಲ್ಲಿ 2 ಅಥವಾ ಮೂರು ಭಾಗಗಳಾಗಿ ಮೂಡಿಬರಲಿದೆಯಾ ಇಲ್ಲವ ೆಂಬ ಗೊಂದಲಗಳಿಗೆ ಈವರೆಗೂ ಚಿತ್ರತಂಡ ತೆರೆ ಎಳೆದಿಲ್ಲ.
ಅಂದ್ಹಾಗೆ ಈ ಚಿತ್ರದ ನಾಯಕ ಹಾಗೂ ವಿಲನ್ ಫಿಕ್ಸ್ ಆಗಿದ್ರೂ, ನಾಯಕಿಯ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಸೀತೆಯ ಪಾತ್ರಕ್ಕೆ ದೊಡ್ಡ ದೊಡ್ಡ ಸ್ಟಾರ್ ನಟಿಯರ ಹೆಸರುಗಳು ಕೇಳಿಬರುತ್ತಿವೆ. ಆದ್ರೆ ಈವರೆಗೂ ಫೈನಲ್ ಉತ್ತರ ಸಿಕ್ಕಿಲ್ಲ. ಈ ಚಿತ್ರಕ್ಕೆ ಓಂ ರಾವತ್ ಅವರು ಆಕ್ಷನ್ ಕಟ್ ಹೇಳ್ತಾಯಿದ್ದು, ಭೂಷಣ್ ಕುಮಾರ್, ಕೃಷ್ಣಕುಮಾರ್ ಹಾಗೂ ನಿರ್ದೇಶಕ ಓಂ ರಾವತ್ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
‘ಸ್ನೇಹನಾ ಪ್ರೀತಿನಾ’ ಸಿನಿಮಾದ ನಿರ್ದೇಶಕ ಶಾಹುರಾಜ್ ಶಿಂಧೆ ವಿಧಿವಶ
ಸದ್ಯ ಬಾಹುಬಲಿ ಖ್ಯಾತಿಯ ನಂತರ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಅವರು ಇದೀಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾದ ರಾಧೆ ಶ್ಯಾಮ್ ಚಿತ್ರದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಅವರು ಪ್ರಭಾಸ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ತಾಯಿದ್ದಾರೆ. ರಾಧೇ ಶ್ಯಾಮ್ ಸಿನಿಮಾದ ಚಿತ್ರೀಕರಣ ಈಗಾಗಲೇ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಅಲ್ಲದೇ ಈ ಚಿತ್ರದ ಜೊತೆಗೆ ಮತ್ತೊಂದು ಹೊಸ ಸಿನಿಮಾಗೂ ಪ್ರಭಾಸ್ ಅವರು ಸಹಿ ಹಾಕಿದ್ದಾರೆ. ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಲಿದ್ದಾರೆ ಎನ್ನಲಾಗಿದ್ದು, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಸಹ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅಖಿಲ ಭಾರತ ಇಸ್ಲಾಮಿಕ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಹಿಂದೂ ವಿದ್ಯಾರ್ಥಿ ಶುಭಮ್ ಯಾದವ್
Adipurush
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel