ಚಂದ್ರನ ಅಂಗಳ ಗೆದ್ದ ನಂತರ ಇಸ್ರೋ(ISRO) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸದ್ಯ ಸೂರ್ಯನತ್ತ ಹೊರಟಿದೆ.
ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್1 ಮಿಷನ್(Aditya L1 Mission) ಲಾಂಚ್ ಆಗಲಿದೆ. PSLV-C57, ಆದಿತ್ಯ ಎಲ್-1 ನೌಕೆಯನ್ನ ನಭಕ್ಕೆ ಹೊತ್ತೊಯ್ಯಲಿದೆ.
ಇದು ಭಾರತದ ಮೊಟ್ಟ ಮೊದಲ ಸೂರ್ಯ ಮಿಷನ್ ಆಗಿದೆ. ಇದು ನಿಗದಿತ ಗುರಿ ತಲುಪುವುದಕ್ಕೆ ಬರೋಬ್ಬರಿ 125 ದಿನ ತೆಗೆದುಕೊಳ್ಳುತ್ತಿದೆ. ನಾಲ್ಕು ತಿಂಗಳ ಬಳಿಕ ಎಲ್1 ಪಾಯಿಂಟ್ ನ್ನು ಇದು ತಲುಪುತ್ತದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಈ ಲ್ಯಾಗ್ರೇಂಜ್ ಪಾಯಿಂಟ್ 1 ಅಥವಾ ಎಲ್1 ಪಾಯಿಂಟ್ ಬಳಿಯೇ ಸುತ್ತುತ್ತಾ 5ವರ್ಷ ಸೂರ್ಯನ ಅಧ್ಯಯನ ನಡೆಸಲಿದೆ.