ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದ ಸೋಂಕಿನ ಸರಪಳಿ ಮುಂದುವರಿದಿದ್ದು ಇಂದು ಉಳ್ಳಾಲದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಸೋಂಕು ತಗುಲಿದ್ದ ರೋಗಿ ಸಂಖ್ಯೆ ಪಿ-507 ಸಂಪರ್ಕದಿಂದ ಉಳ್ಳಾಲದ ಸೋಮೇಶ್ವರದ ದಾರಂದಬಾಗಿಲು ಪ್ರದೇಶದ ಮಹಿಳೆಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಮಂಗಳವಾರ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ಉಡುಪಿ ಮೂಲದ ತಾಯಿ ಮಗನಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.
ಈ ಮೊದಲು ಫಸ್ಟ್‌ನ್ಯೂರೋದಲ್ಲಿ ಚಿಕಿತ್ಸೆ ಪಡೆದಿದ್ದ ವೃದ್ಧೆ ಮತ್ತು ಸೊಸೆ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟ ನಂತರ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಇದೀಗ ಉಳ್ಳಾಲದ ಸೋಮೇಶ್ವರದ ದಾರಂದಬಾಗಿಲು ಪ್ರದೇಶದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ದಾರಂದಬಾಗಿಲು ಪ್ರದೇಶವನ್ನೂ ಸೀಲ್‌ಡೌನ್ ಮಾಡುವ ತಯಾರಿ ನಡೆಯುತ್ತಿದೆ.
ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದ್ದೂ, ಜನರಲ್ಲಿ ಆತಂಕ ಉಂಟಾಗಿದೆ.








