ಪತ್ರಿಕೆಗಳಿಗೆ ಕಳೆದ ಒಂದು ವರ್ಷದಿಂದ ಬಾಕಿ ಇರುವ ಜಾಹಿರಾತು ಹಣವನ್ನು ಬಿಡುಗಡೆ ಮಾಡುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ನಿನ್ನೆ ಕಾಂಗ್ರೆಸ್ ನಾಯಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಜಾಹಿರಾತು ಹಣ ಬಾಕಿ ಇರುವ ಬಗ್ಗೆ ಗಮನ ಸೆಳೆದರು. ಈ ಕುರಿತು ಬರೆದಿರುವ ಪತ್ರವನ್ನೂ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಅವರು ಸಲ್ಲಿಸಿದರು. ಲಾಕ್ ಡೌನ್ ನಿಂದಾಗಿ ಮಾದ್ಯಮ ಕ್ಷೇತ್ರ ಸಹ ತೊಂದರೆಗೆ ಸಿಲುಕಿದೆ. ಅದರಲ್ಲೂ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಸಂಕಷ್ಟದಲ್ಲಿವೆ. ಜಾಹಿರಾತು ಹಣ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ. ಜೊತೆಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ವಿಶೇಷ ಸಂದರ್ಭವೆಂದು ಪರಿಗಣಿಸಿ ಜಾಹಿರಾತು ನೀಡುವಂತೆ ಒತ್ತಾಯಿಸಿದರು.
ಆರ್ ಸಿಬಿ ಕಲಿಗಳ ಜತೆ ಕನ್ನಡಿಗರ ನಂದಿನಿ ದರ್ಬಾರ್ ಐಪಿಎಲ್ ಮೂಲಕ ವಿಶ್ವಮಟ್ಟಕ್ಕೆ ಲಗ್ಗೆ ಇಡಲು ಕೆಎಂಎಫ್ ಮಾಸ್ಟರ್ ಪ್ಲಾನ್
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿರುವ ಕೆಎಂಎಫ್ ನ ನಂದಿನಿ ಬ್ರ್ಯಾಂಡ್ ಇದೀಗ ಕ್ರಿಕೆಟ್ ಜಗತ್ತಿನ ರಣಕಣಕ್ಕೆ ಇಳಿದಿದೆ. ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು...








