Aero India 2023 : ಏಷ್ಯಾದ ಅತಿದೊಡ್ಡ ಏರ್ ಶೋಗೆ ಉದ್ಘಾಟಿಸಿದ ಪ್ರಧಾನಿ ಮೋದಿ…
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ 14 ನೇ ಆವೃತ್ತಿಯನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಏರೋ ಇಂಡಿಯಾ 2023, ಏಷ್ಯಾದ ಅತಿದೊಡ್ಡ ಏರೋ ಶೋ ಫೆಬ್ರವರಿ 13 ರಿಂದ ಫೆಬ್ರವರಿ 17 ರವರೆಗೆ ನಡೆಯಲಿದ್ದು, ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನ ಆಕರ್ಷಿಸಲು ಸ್ಥಳೀಯವಾಗಿ-ಉತ್ಪಾದಿತ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ. ಫೆಬ್ರವರಿ 16, 17ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರಲಿದೆ.
ಪ್ರಧಾನಿ ಮೋದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಬೊಮ್ಮಾಯಿ ಸಾಥ್ ನೀಡಿದ್ದಾರೆ. ನಮೋ ಬೆಳಗ್ಗೆ 11.30ರವರೆಗೆ ಉಕ್ಕಿನ ಹಕ್ಕಿಗಳ ಸಾಹಸ ವೀಕ್ಷಿಸಲಿದ್ದಾರೆ.
Aero India 2023: Prime Minister Modi inaugurated Asia’s largest air show…








