ಕಾಬುಲ್ : ತಾಲೀಬಾನಿಗಳಿಂದ ಕಿಡ್ನ್ಯಾಪ್ ಆಗಿದ್ದ 150 ಭಾರತೀಯರು ರಿಲೀಸ್…?
ಕಾಬುಲ್ : ಇಂದು ಬೆಳಿಗ್ಗೆ ಕಾಬೂಲ್ ವಿಮಾನ ನಿಲ್ದಾಣದ ಬಳಿ ಸುಮಾರು 150 ಭಾರತೀಯ ಪ್ರಜೆಗಳನ್ನು ತಾಲಿಬಾನ್‌ಗಳು ಕಿಡ್ನಾಪ್ ಮಾಡಿರುವುದಾಗಿ ವರದಿಯಾಗಿತ್ತು. ಆದ್ರೆ ಇದೀಗ ಅವರೆಲ್ಲರನ್ನೂ ತೀವ್ರ ವಿಚಾರಣೆ ನಡೆಸಿದ ಬಳಿಕ ರಿಲೀಸ್ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹೌದು ಸರ್ಕಾರದ ಮೂಲಗಳ ಪ್ರಕಾರ ಅಪಹರಣಕ್ಕೆ ಒಳಗಾಗಿರುವ ಯಾರೊಬ್ಬರಿಗೂ ಯಾವುದೇ ತೊಂದರೆಯಾಗಿಲ್ಲ ಎನ್ನಲಾಗ್ತಿದೆ. ಭಾರತೀಯ ಪ್ರಜೆಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಭಾರತೀಯ ನಾಗರಿಕರ ಬಿಡುಗಡೆಗಾಗಿ ಬ್ಯಾಕ್-ಚಾನೆಲ್ ಮಾತುಕತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ತೈವಾನ್ ಪಡೆಯಲು ತಾಲಿಬಾನಿಗಳನ್ನು ಅನುಸರಿಸುವ ಕನಸು ಕಾಣ್ತಿದೆ ಚೀನಾ – ತೈವಾನ್ ವಿದೇಶಾಂಗ ಸಚಿವ
ತಾಲಿಬಾನ್ ಭಾರತೀಯರು ಸೇರಿದಂತೆ 150 ಜನರನ್ನು ಅಪಹರಿಸಲಾಗಿದ್ದು, ಇದೀಗ ರಿಲೀಸ್ ಮಾಡಲಾಗಿದೆ ಎಂದು ಕಾಬೂಲ್‌ನ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಭಾರತೀಯ ವಾಯುಪಡೆಯ ಸಿ -130 ಜೆ ಸಾರಿಗೆ ವಿಮಾನವು ಕಾಬೂಲ್ ನಿಂದ ಸುಮಾರು 85 ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾದ ಕೆಲವು ಗಂಟೆಗಳ ನಂತರ ಈ ಮಾಹಿತಿ ಹೊರಬಿದ್ದಿತ್ತು.
ಅಪಹರಣಕ್ಕೊಳಗಾಗಿರುವ ಭಾರತೀಯರು ಸದ್ಯ ಸುರಕ್ಷಿತವಾಗಿದ್ದಾರೆ ಎನ್ನಲಾಗ್ತಿದೆ. ಅವರನ್ನು ಅಪಹರಿಸಿದ ಗುಂಪು ಅವರ ಬಳಿ ಇದ್ದ ಪಾಸ್‌ಪೋರ್ಟ್ ಪಡೆದು ತನಿಖೆ ನಡೆಸಿದೆ ಎಂದು ವರದಿಯಾಗಿತ್ತು. ಇದೀಗ, ಅವರು ಕಾಬೂಲ್ ಸಮೀಪದ ಗರಾಜ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ.








